ಕುಂದಗೋಳ : ತಾಲೂಕಿನ ಬು.ಕೊಪ್ಪ ಗ್ರಾಮದ ಶ್ರೀ ಮೈಲಾರಲಿಂಗೇಶ್ವರ ಜಾತ್ರಾ ಮಹೋತ್ಸವ ಫೆ.22 ರಂದು ನಾಳೆ ಸೋಮವಾರ ದಿನ ನಡೆಯಲಿದೆ.
ನಾಳೆ ಬೆಳಿಗ್ಗೆ ಶ್ರೀ ಮೈಲಾರಲಿಂಗೇಶ್ವರ ಮೂರ್ತಿಗೆ ಮಹಾಭಿಷೇಕ, ಮಹಾಪೂಜೆ ನೆರವೇರಲಿದೆ. ಬಳಿಕ ಭಕ್ತರಿಂದ ಹರಕೆಯ ಕಾರ್ಯಕ್ರಮ ಜರುಗಲಿವೆ. ಸರಪಳಿ ಪವಾಡ, ಕುದುರೆಕಾರರಿಂದ ದೋಣಿ ತುಂಬುವ ಕಾರ್ಯಕ್ರಮದ ನಂತರದಲ್ಲಿ ಗೋರವಪ್ಪಜ್ಜನವರಿಂದ ಕಾರ್ಣಿಕೋತ್ಸವ ನಡೆಯಲಿದೆ.
ಕುಂದಗೋಳ ತಾಲೂಕಿನ ಸುತ್ತ ಮುತ್ತಲಿನ ಹಳ್ಳಿಯ ಗೋರವಯ್ಯ ವೇಷಧಾರಿಗಳು ಹಾಗೂ ಸಾರ್ವಜನಿಕರು ಜಾತ್ರೆಯ ಸೇರಲಿದ್ದಾರೆಂದು ದೇವಸ್ಥಾನದ ಕಮೀಟಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
21/02/2021 12:09 pm