ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ- ಫೆ.28 ರಂದು ಭಕ್ತ ಸಮಾವೇಶ ಕಾರ್ಯಕ್ರಮ

ಹುಬ್ಬಳ್ಳಿ- ಮಠಾಧಿಪತಿಗಳ ಒಕ್ಕೂಟ ಸಹಾಭಾಗಿತ್ವದಲ್ಲಿ ಫೆಬ್ರವರಿ 28 ರವಿವಾರದಂದು ಬೆಳಿಗ್ಗೆ 10 ಗಂಟೆಗೆ ಭಕ್ತ ಸಮಾವೇಶವನ್ನು ನಗರದ ಭೈರಿದೇವರಕೊಪ್ಪದ ಶ್ರೀ ಶಿವಾನಂದ ಮಠದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಜಗದ್ಗುರು ಶ್ರೀ ಸದಾಶಿವಾನಂದ ಸ್ವಾಮೀಜಿ, ಶಿವಾನಂದ ಬ್ರಹ್ಮಮಠ ಗದಗ ಹೇಳಿದರು.

ನಗರದಲ್ಲಿ ಮಾತನಾಡಿದ ಅವರು, ಜಾತಿ ಆಧಾರಿತದ ಮೇಲೆ ಸನ್ಯಾಸ ಸ್ವೀಕರಿಸುವುದಿಲ್ಲ ಮತ್ತು ಸಾಮಾಜಿಕ ಸಾಮರಸ್ಯ ಹಾಗೆ ಸನ್ಯಾಸತ್ವಕ್ಕೆ ಯಾವುದೇ ಜಾತಿ ಇರುವುದಿಲ್ಲ. ಜೊತೆಗೆ ಧರ್ಮ ಸಂರಕ್ಷಣೆ ಕುರಿತು ಸುಮಾರು 260 ಕ್ಕೂ ಹೆಚ್ಚು ಸಾಧು ಸಂತರು ಮುಖ್ಯವಾಗಿ ಜಗದ್ಗುರು ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಮಹಾಸ್ವಾಮಿಗಳು ಕನೇರಿ ಮಠ ಉಪಸ್ಥಿತಿಯಲ್ಲಿ ಈ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಹಲವಾರು ರಾಜಕೀಯ ಗಣ್ಯರು ಕೂಡ ಈ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಸಾವಿರಾರು ಭಕ್ತರು ಕೂಡ ಭಾಗವಹಿಸಲಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಪೂಜ್ಯ ಶ್ರೀ ಶಂಕರಾರೂಡ ಸ್ವಾಮೀಜಿ, ರಾಮರೂಡ ಮಠ ಶಿರೋಳ, ಜಗದ್ಗುರು ಶ್ರೀ ಶಿವಶಂಕರ ಶಿವಾಚಾರ್ಯ ಸ್ವಾಮೀಜಿ, ವೀರಭಕ್ತಾದಿಮಠ ಹುಬ್ಬಳ್ಳಿ, ಶ್ರೀ ಚಿದ್ರುಪಾನಂದ ಸ್ವಾಮೀಜಿ ಶಿವಾನಂದ ಮಠ ಸಂಗಳ, ಶ್ರೀ ವಿಜಯಸಿದ್ದೇಶ್ವರ ಸ್ವಾಮೀಜಿ, ಮಹಾಂತಲಿಂಗೇಶ್ವರ ಮಠ ಮಣ್ಣಿಕೇರಿ, ಮಾಜಿ ಪಾಲಿಕೆಯ ಸದಸ್ಯ ಶ್ರೀ ಮಲ್ಲಿಕಾರ್ಜುನ ಗುಂಡೂರ ಇದ್ದರು..

Edited By : Manjunath H D
Kshetra Samachara

Kshetra Samachara

20/02/2021 08:09 pm

Cinque Terre

15.87 K

Cinque Terre

1

ಸಂಬಂಧಿತ ಸುದ್ದಿ