ನವಲಗುಂದ : ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಹುಟ್ಟುಹಬ್ಬದ ಹಿನ್ನಲೆ ಇಂದು ದಾಸನ ಅಭಿಮಾನಿಗಳು ನವಲಗುಂದದ ಹಲವು ಆಸ್ಪತ್ರೆಗಳಲ್ಲಿ ರೋಗಿಗಳಿಗೆ ಉಚಿತ ಹಣ್ಣು-ಹಂಪಲುಗಳನ್ನು ವಿತರಿಸಿದರು.
ಪಟ್ಟಣದ ತಾಲೂಕ ಆಸ್ಪತ್ರೆ, ಜೋಶಿ ಆಸ್ಪತ್ರೆ ಸೇರಿದಂತೆ ಪ್ರಮುಖ ಬೀದಿಗಳಲ್ಲಿ ಹಣ್ಣು-ಹಂಪಲು ಗಳನ್ನು ಹಂಚಿದ ನವಲಗುಂದದ ಡಿ ಬಾಸ್ ಅಭಿಮಾನಿಗಳು ತಮ್ಮ ನೆಚ್ಚಿನ ನಟನ ಹುಟ್ಟುಹಬ್ಬವನ್ನು ವಿಶೇಷವಾಗಿ ಆಚರಿಸುವ ಮೂಲಕ ಸಂಭ್ರಮ ಪಟ್ಟರು.
ಈ ವೇಳೆ ಹುಚ್ಚಪ್ಪ, ಪ್ರೇಮ ಕಲಾಲ, ಅನಿಲ್ ಚಾಕರಿ, ರಾಕೇಶ್ ತೆರದಾಳ, ಮುತ್ತು, ಕೃಷ್ಣ, ವಿಜಯ, ಸುನೀಲ, ಮಾಂತೇಶ್, ದೀಕ್ಷಿತ್, ಮಂಜುನಾಥ್ ಇದ್ದರು.
Kshetra Samachara
16/02/2021 03:56 pm