ಹುಬ್ಬಳ್ಳಿ: ಪುರಂದರ ದಾಸರು ಅನೇಕ ಕೀರ್ತನೆಗಳನ್ನು ರಚಿಸಿದ್ದು, ಅದರಲ್ಲಿನ ಸಾರವು ಪ್ರತಿಯೊಬ್ಬರ ಜೀವನಕ್ಕೂ ದಾರಿ ದೀಪವಾಗಿದೆ. ಸಮಾಜದ ಎಲ್ಲ ವರ್ಗದವರಿಗೂ ಪುರಂದರ ದಾಸರ ಕೀರ್ತನೆ ತಲುಪುವಂತಾಗಬೇಕು ಎಂದು ವಿಶ್ವಮಾನ್ಯ ಪ್ರಶಸ್ತಿ ಪುರಸ್ಕೃತ ಹಾಗೂ ಸಮಾಜ ಸೇವಕ ಸಂತೋಷ ಆರ್. ಶೆಟ್ಟಿ ನುಡಿದರು.
ಸಂಯುಕ್ತಾ ಪ್ರತಿಷ್ಠಾನ, ಆಚಾರ್ಯ ಸೇವಾ ಸ್ತುತಿ ಹಾಗೂ ದಕ್ಷಿಣ ಕನ್ನಡ ದ್ರಾಡ ಬ್ರಾಹ್ಮಣ ಸಮಾಜದಿಂದ ಇಲ್ಲಿನ ದೇಶಪಾಂಡೆ ನಗರದ ಶ್ರೀಕೃಷ್ಣ ಕಲ್ಯಾಣ ಮಂಟಪದಲ್ಲಿ ಗುರುವಾರ ನಡೆದ ಪುರಂದೋತ್ಸವ ಹಾಗೂ ನಾದ ವಿಠಲ ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಇಂದಿನ ಶಾಲಾ ಮಕ್ಕಳಿಗೆ ಕೀರ್ತನೆ ಹಾಗೂ ಸಾಹಿತ್ಯದಂತಹ ಸ್ಪರ್ಧೆ ಏರ್ಪಡಿಸುವ ಮೂಲಕ ದಾಸರ ಸಾಹಿತ್ಯಗಳನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಸಮಾಜಕ್ಕೆ ದಾರಿದೀಪವಾಗಲಿದೆ ಎಂದರು.
ಖ್ಯಾತ ವಿದ್ವಾಂಸ ಪಂ. ಪಾಂಡುರಂಗಾಚಾರ್ಯ ಹುನಗುಂದ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ನಂತರ ಮಾತನಾಡಿದ ಅವರು, ಭಗವಂತನ ದರ್ಶನ ಆಗಬೇಕೆಂದರೇ ಭಕ್ತಿಯಲ್ಲಿ ತಲ್ಲಿನರಾಗಬೇಕು. ಮನಸ್ಸಿನಲ್ಲಿ ಸದಾ ಭಗವಂತನನ್ನು ದರ್ಶನವಾಗಲು ಸಾಧ್ಯ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಯುತಾ ಪ್ರತಿಷ್ಠಾನದ ಅಧ್ಯಕ್ಷ ಪಿ.ಎಸ್. ಪಾರ್ವತಿ ವಹಿಸಿದ್ದರು. ಅದಕ್ಕೂ ಮುನ್ನ ವಿವಿಧ ಭಜನಾ ಮಂಡಳಿಗಳಿಂದ ದಾಸ ನಮನ ಕಾರ್ಯಕ್ರಮ ಹಾಗೂ ಸಭಾ ಕಾರ್ಯಕ್ರಮದ ನಂತರ ದಾಸ ರೂಪಕ, ದಾಸ ಸಂಗೀತ ಕಾರ್ಯಕ್ರಮಗಳು ನಡೆದವು. ದಕ್ಷಿಣ ದ್ರಾಡ ಬ್ರಾಹ್ಮಣ ಸಮಾಜದ ಅಧ್ಯಕ್ಷ ರಾಘವೇಂದ್ರ ಎಡೆನೀರು, ಸುಶಿಲೇಂದ್ರ ಕುಂದರಗಿ, ಪ್ರಕಾಶ ಜೋಶಿ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
Kshetra Samachara
12/02/2021 12:30 pm