ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಸೇವಾಲಾಲ್ ಸಾಂಸ್ಕೃತಿಕ ಕೇಂದ್ರ ನಿರ್ಮಿಸಲು 30 ಲಕ್ಷ : ಜೋಶಿ ಸಂತಸ

ಧಾರವಾಡ : ಧಾರವಾಡ ಲೋಕಸಭಾ ಕ್ಷೇತ್ರದ ಕಲಘಟಗಿ ತಾಲೂಕಿನ ಬಿ. ಶಿಗಿಹಟ್ಟಿ ತಾಂಡ ಹಾಗೂ ದೇವಿಕೊಪ್ಪ ತಾಂಡಗಳಲ್ಲಿ ಮತ್ತು ಕುಂದಗೋಳ ತಾಲೂಕು ಗೌಡಗೇರಿ ತಾಂಡಗಳಲ್ಲಿ ಸೇವಾಲಾಲ್ ಸಾಂಸ್ಕೃತಿಕ ಕೇಂದ್ರ ನಿರ್ಮಿಸಲು ಕರ್ನಾಟಕ ತಾಂಡಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಶ್ರೀ ರಾಜೀವ್ ಅವರು ಮೂವತ್ತು ಲಕ್ಷ ರೂಪಾಯಿಗಳ ಅನುದಾನ ಬಿಡುಗಡೆ ಮಾಡಿದ್ದಾರೆ ಎಂದು ಸಂಸದ ಪ್ರಹ್ಲಾದ ಜೋಶಿ ಜೋಶಿ ಹೇಳಿದ್ದಾರೆ.

ಇದು ನನ್ನ ಪ್ರಸ್ತಾವನೆಯಾಗಿತ್ತು ಅನುದಾನ ಬಿಡುಗಡೆ ಮಾಡಿದ ರಾಜೀವ್ ಅವರಿಗೆ ಜೋಶಿ ಧನ್ಯವಾದ ತಿಳಿಸಿದ್ದಾರೆ.

ಅನೇಕ ಬಾರಿ ಜಗದ್ಗುರು ಸಂತ ಶ್ರೀ ಸೇವಾಲಾಲ್ ಭವನ ನಿರ್ಮಿಸಲು ಕಲಘಟಗಿ ಹಾಗೂ ಕುಂದಗೋಳ ತಾಲೂಕಿನ ಶ್ರೀ ಸೇವಾಲಾಲ್ ಬಂಜಾರ ಸಂಘದ ಸದಸ್ಯರುಗಳು ನನ್ನನ್ನು ಒತ್ತಾಯಿಸಿ ಮನವಿ ಸಲ್ಲಿಸಿದ್ದರು. ನಾನು ನಿಗಮದ ಅಧ್ಯಕ್ಷರಿಗೆ ಅನುದಾನ ಬಿಡುಗಡೆ ಮಾಡಲು ಕೋರಿ ಪತ್ರ ಬರೆದ ಪರಿಣಾಮ ಅನುದಾನ ಬಿಡುಗಡೆಯಾಗಿರುವುದು ಖುಷಿ ತಂದಿದೆ ಎಂದು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Edited By : Nirmala Aralikatti
Kshetra Samachara

Kshetra Samachara

06/02/2021 08:24 am

Cinque Terre

25.52 K

Cinque Terre

0

ಸಂಬಂಧಿತ ಸುದ್ದಿ