ಕುಂದಗೋಳ : ತಾಲೂಕಿನ ಸುಕ್ಷೇತ್ರ ಬೆನಕನಹಳ್ಳಿಯ ಶ್ರೀ ಬಲ್ಮೂರಿ ವರಸಿದ್ಧಿ ವಿನಾಯಕ ಹಾಗೂ ಹೊರಗಿನ ಸಿದ್ಧಪ್ಪಜ್ಜ ದೇವರ ಜಾತ್ರಾ ಮಹೋತ್ಸವ ಸಮಾರಂಭ ಫೆ.10 ರ ಬುಧವಾರ ನೆರವೇರಲಿದೆ.
ಜಾತ್ರೆಯ ನಿಮಿತ್ತವಾಗಿ ಬಲ್ಮೂರಿ ಗಣೇಶನಿಗೆ ಗಂಗಾ ಪೂಜೆ, ಮಹಾ ರುದ್ರಾಭಿಷೇಕ ಮಹಾ ಗಣಹೋಮ ಕುಂಬಾಭಿಷೇಕ, ಬಿಲ್ವಾರ್ಚನೆ, ಮಹಾ ಮಂಗಳಾರತಿ, ಪಲ್ಲಕ್ಕಿ ಉತ್ಸವ ನಡೆಯಲಿದೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ವಾದ್ಯ ಮೇಳವನ್ನು ಆಯೋಜಿಸಲಾಗಿದೆ.
ಬೆನಕನಹಳ್ಳಿಯಲ್ಲಿ ಅಂದು ಸಂಜೆ 5 ಗಂಟೆಗೆ ಸರ್ವಧರ್ಮ ಸಭೆ ಹಾಗೂ 6 ಗಂಟೆಗೆ ಜೀ ಕನ್ನಡ ವಾಹಿನಿ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸಂಜು ಬಸಯ್ಯ ಅವರಿಂದ ಹಾಸ್ಯ ಮತ್ತು ಡ್ಯಾನ್ಸ್ ಅಕಾಡೆಮಿ ಖ್ಯಾತಿಯ ಅಂಕಿತ ಹೊಸಕಟ್ಟಾ ಗೋಕರ್ಣ ಇವರಿಂದ ಸಂಗೀತ ರಸಮಂಜರಿ ಡ್ಯಾನ್ಸ್ ಕಾರ್ಯಕ್ರಮಗಳು ಏರ್ಪಡಲಿವೆ.
ಈ ಕಾರ್ಯಕ್ರಮದಲ್ಲಿ ಕುಂದಗೋಳ ತಾಲೂಕಿನ ಸಮಸ್ತ ಭಕ್ತಾದಿಗಳು ಆಗಮಿಸಿ ಪಾಲ್ಗೊಳ್ಳುವಂತೆ ಶ್ರೀ ವರಸಿದ್ಧಿ ವಿನಾಯಕ ಕಮಿಟಿ ಬೆನಕನಹಳ್ಳಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Kshetra Samachara
03/02/2021 03:30 pm