ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮಾಚಿದೇವರ ಜಯಂತಿ ವಚನ ಸಾಹಿತ್ಯ ಪುನಾರವಲೋಕನ

ಕುಂದಗೋಳ : ಮಡಿವಾಳ ಸಮುದಾಯದ ಮಹಾನ್‌ ಚೇತನ ಮಾಚಿದೇವರ ಮಾರ್ಗದರ್ಶನ ಸಮಾಜದ ಪ್ರತಿಯೊಂದು ವರ್ಗಕ್ಕೆ ಅವಶ್ಯಕವಾಗಿದೆ.

ಮಾಚಿದೇವರು ತಮ್ಮ ಅಮೂಲ್ಯ ವಚನ ಸಾಹಿತ್ಯವನ್ನು ಸಮಾಜದ ಏಳ್ಗೆಗೆ ತಿಳಿಸಿ ಬದಲಾವಣೆಗೆ ಶ್ರಮಿಸಿದವರು. ಸಮಾಜದಲ್ಲಿನ ಅಸಮಾನತೆಯನ್ನು ಹೋಗಲಾಡಿಸಲು ಜೀವನವನ್ನು ಮುಡಿಪ್ಪಿಟ್ಟು ಕಾಯಕದಲ್ಲೇ ಶರಣರಾದವರು ಎಂದು ಉಪನ್ಯಾಸಕ ನೆನಪು ಪೌಂಡೇಶನ್ ಸಂಸ್ಥಾಪಕ ವಿರೇಶ ಪ್ರಳಯಕಲ್ಮಠ ಹೇಳಿದರು.

ಪಟ್ಟಣದ ತಹಶೀಲ್ದಾರ ಕಚೇರಿ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಮಡಿವಾಳ ಮಾಚಿದೇವರ ಜಯಂತಿ ಕಾರ್ಯಕ್ರಮದಲ್ಲಿ ಮಾಚಿದೇವರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಉಪನ್ಯಾಸ ನೀಡುವಾಗ ಶರಣರ ಕಾಲದಲ್ಲಿ ಮಡಿವಾಳ ಮಾಚಿದೇವರು ನೀಡಿದ ಸಾಧನೆ ಶರಣ ತತ್ವಗಳನ್ನು ಜನರಿಗೆ ತಿಳಿಸಿದರು. ತಹಶೀಲ್ದಾರ ಬಸವರಾಜ ಮೆಳವಂಕಿ ಮಾತನಾಡಿದರು.

ಈ ಸಂದರ್ಭದಲ್ಲಿ ತಹಶೀಲ್ದಾರ ಬಸವರಾಜ ಮೆಳವಂಕಿ, ಮಡಿವಾಳ ಸಮಾಜದ ಮುಖಂಡ ಮಹೇಶ್ ಮಡಿವಾಳರ ಹಾಗೂ ತಹಶೀಲ್ದಾರ ಕಚೇರಿಯ ಸಿಬ್ಬಂದಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.

Edited By : Manjunath H D
Kshetra Samachara

Kshetra Samachara

01/02/2021 03:13 pm

Cinque Terre

16.32 K

Cinque Terre

0

ಸಂಬಂಧಿತ ಸುದ್ದಿ