ಕುಂದಗೋಳ : ಭಾರತ ಜಾತ್ಯಾತೀತ ಭಾವೈಕ್ಯತೆಯ ರಾಷ್ಟ್ರ ಎಂಬುದಕ್ಕೆ ಇಲ್ಲಿನ ಜನರ ಒಡನಾಟ ಧಾರ್ಮಿಕ ಕಾರ್ಯಕ್ರಮ ವಿವಿಧತೆಯಲ್ಲಿ ಏಕತೆ ಕಾಣುವ ಸಂಸ್ಕೃತಿ ಸಾಂಪ್ರದಾಯವೇ ಸಾಕ್ಷಿ.
ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ ಕುಂದಗೋಳ ಪಟ್ಟಣದಲ್ಲಿ ಮತ್ತೊಂದು ಘಟನೆ ನಡೆದಿದೆ. ಅದೇನಪ್ಪಾ ? ಅಂದ್ರಾ,
ಭಾರತೀಯರೆಲ್ಲರೂ ಹೆಮ್ಮೆ ಪಡುವ ರಾಮ ಮಂದಿರ ನಿರ್ಮಾಣದ ವಿಷಯ ಎಲ್ಲರಿಗೂ ಗೊತ್ತು. ಈ ಮಂದಿರದ ನಿರ್ಮಾಣದ ನಿಧಿ ಸಂಗ್ರಹಣೆಗಾಗಿ ಕುಂದಗೋಳ ಪಟ್ಟಣ ಮುಸ್ಲಿಂ ಬಾಂಧವರು ಕೈ ಜೋಡಿಸಿದ್ದಲ್ಲದೆ, ಸ್ವತಃ ತಮ್ಮ ಕೈಲಾದ ಧನಸಹಾಯ ನೀಡಿದ್ದಾರೆ.
ಕುಂದಗೋಳ ಪಟ್ಟಣದ 15 ವಾರ್ಡ್ ಸದಸ್ಯ ದೀಪಕ್ ಕಲಾಲ ಅವರ ಸಹಯೋಗದಲ್ಲಿ ಕಲ್ಯಾಣಪುರ ಬಸವಣ್ಣನವರು ಹಾಗೂ ಮಖಂಡರ ನೇತೃತ್ವದಲ್ಲಿ ಇಡೀ ವಾರ್ಡ್ ಒಳಗೆ ಇರುವ ಶೇ.70% ಮುಸ್ಲಿಂ ಬಾಂಧವರು ಹಾಗೂ ಹಿಂದೂಗಳು ಸೇರಿ ರಾಮ ಮಂದಿರ ನಿರ್ಮಾಣಕ್ಕೆ ಭಕ್ತಿ ಸೇವೆ ಸಲ್ಲಿಸಿದ್ದಾರೆ.
Kshetra Samachara
26/01/2021 09:02 am