ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ನೀರಸಾಗರ ಗ್ರಾಮದಲ್ಲಿ ಮಹಿಳಾ ಸ್ವ -ಸಹಾಯ ಸಂಘದ ಉದ್ಘಾಟನೆ ಹಾಗೂ ತರಬೇತಿ

ಕಲಘಟಗಿ:ತಾಲೂಕಿನ ನೀರಸಾಗರ ಗ್ರಾಮದಲ್ಲಿ ಎಸ್ ಎನ್ ಎಸ್ ಫೌಂಡೇಶನ್ ನಿಂದ ಮಹಿಳಾ ಸ್ವಸಹಾಯ ಸಂಘದ ಉದ್ಘಾಟನೆ ಹಾಗೂ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು.

ಕೆ.ಸಿ.ಸಿ.ಬ್ಯಾಂಕಿನ ನೋಡಲ್ ಅಧಿಕಾರಿ ಕೆ ಸಿ ಕಡಕೊಳ ಕಾರ್ಯಕ್ರಮ ಉದ್ಘಾಟನೆ ಮಾಡಿ ಮಾತನಾಡಿ, ಮಹಿಳಾ ಸ್ವ-ಸಹಾಯದ ಸಂಘದ ಉಪಯೋಗ ಹಾಗೂ ಸಂಘದ ಲೆಕ್ಕ ಪತ್ರಗಳನ್ನು ಬರೆಯುವ ರೀತಿಗಳನ್ನು ಹಾಗೂ ಬ್ಯಾಂಕಿನಲ್ಲಿ ದೊರೆಯವ ಸೌಲಭ್ಯದ ಕುರಿತು ತಿಳಿಸಿದರು.

ಮಹಿಳಾ ಸಾಮುಖ್ಯದ ಜಿಲ್ಲಾ ಅಧಿಕಾರಿ ಶ್ರೀಮತಿ ಆರತಿ ಸಬರದ ಮಾತನಾಡಿ, ಸಂಘದ ಮೂಲಕ ಕುಟುಂಬವನ್ನು ಸದೃಢವನ್ನಾಗಿ ಮಾಡಿಕೊಂಡು ಮಕ್ಕಳಿಗೆ ಮೌಲ್ಯಯುತವಾದ ಶಿಕ್ಷಣವನ್ನು ನೀಡುವಲ್ಲಿ ಮಹಿಳೆಯರ ಪಾತ್ರ ಪ್ರಮುಖವಾಗಿರುತ್ತದೆ ಎಂದರು.

ಎಸ್ ಎನ್ ಎಸ್ ಫೌಂಡೇಶನ್ ಮ್ಯಾನೇಜರ್‌ ಉಮಾ ಹಂಪನ್ನವರ ಮಾತನಾಡಿ,ಮಹಿಳಾ ಸ್ವ -ಸಹಾಯ ಸಂಘಗಳು ಕೇವಲ ಉಳಿತಾಯಕ್ಕೆ ಮಾತ್ರ ಸೀಮಿತವಾಗದೆ, ಗ್ರಾಮದ ಅಭಿವೃದ್ಧಿಗೆ ಹೆಚ್ಚು ಪ್ರಾಮುಖ್ಯತೆ ನೀಡುವುದು ಸೂಕ್ತ ಎಂದು ತಿಳಿಸಿದರು.

ಸ್ವಚ್ಛಗೃಹ ಸ್ಪರ್ಧೆಯಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬಹುಮಾನ ವಿತರಣೆ ಮಾಡಲಾಯಿತು.

Edited By : Nagaraj Tulugeri
Kshetra Samachara

Kshetra Samachara

21/01/2021 06:35 pm

Cinque Terre

31.74 K

Cinque Terre

0

ಸಂಬಂಧಿತ ಸುದ್ದಿ