ಕುಂದಗೋಳ : ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣಾ ಕಾರ್ಯಕ್ರಮದ ಪೂರ್ವಭಾವಿಯಾಗಿ ಕುಂದಗೋಳ ಪಟ್ಟಣದಲ್ಲಿ ರಾಮಮಂದಿರ ನಿರ್ಮಾಣದ ವೈಭವದ ಶೋಭಾಯಾತ್ರೆ ಪಟ್ಟಣದ ಗಾಳಿ ಮರೆಮ್ಮದೇವಿ ದೇವಸ್ಥಾನದಿಂದ ಬ್ರಹ್ಮಲಿಂಗೇಶ್ವರ ದೇವಸ್ಥಾನ ಹಾಗೂ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಭಕ್ತರಲ್ಲಿ ಮೆರುಗು ತಂದೊಡ್ಡಿತು.
ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಕಲ್ಯಾಣಪುರ ಬಸವಣ್ಣನವರು ಹಾಗೂ ಪಂಚಗ್ರಹ ಹಿರೇಮಠದ ಶಿತಿಕಂಠೇಶ್ವರ ಶ್ರೀಗಳು ವಹಿಸಿಕೊಂಡು ಭಕ್ತರಿಗೆ ಸಾಥ್ ನೀಡಿದರು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ವೇದಿಕೆಯಾದ ಶೋಭಾಯಾತ್ರೆಯಲ್ಲಿ ಮಕ್ಕಳು ಸ್ವಾತಂತ್ರ್ಯ ಹೋರಾಟಗಾರ ವೇಷ ತೊಟ್ಟು ಕಂಗೋಳಿಸಿದರೆ, ನಾಗರೀಕರೊಬ್ಬರು ತೊಟ್ಟ ಛತ್ರಪತಿ ಶಿವಾಜಿ ವೇಷ ಎಲ್ಲರನ್ನೂ ಗಮನ ಸೆಳೆಯಿತು, ಕಾರ್ಯಕ್ರಮದುದ್ಧಕ್ಕೂ ಕುದುರೆ ಮಜಲು ಡಿಜೆ ಹಾಡುಗಳ ಮೆರುಗು ಯುವಕರು ಮಕ್ಕಳನ್ನು ನಾಲ್ಕು ಹೆಜ್ಜೆ ಕುಣಿಸಿತು.
ಶೋಭಾಯಾತ್ರೆ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಬಸವರಾಜ ಕುಂದಗೋಳಮಠ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷ ವಾಗೀಶ ಗಂಗಾಯಿ ಹಾಗೂ ಪಟ್ಟಣ ಪಂಚಾಯಿತಿ ಸದಸ್ಯರು, ಬಿಜೆಪಿ ಧುರೀಣರು ರಾಮನ ಭಕ್ತರು, ಸಾರ್ವಜನಿಕರು, ಬಿಜೆಪಿ ಯುವ ಮೋರ್ಚಾ ಕಾರ್ಯಕರ್ತರು ಭಾಗವಹಿಸಿದ್ದರು.
Kshetra Samachara
21/01/2021 01:19 pm