ಕಲಘಟಗಿ:ತಾಲೂಕಿನ ದೇವಿಕೊಪ್ಪ ಸರಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ಮತದಾರರ ದಿನಾಚರಣೆಯ ಅಂಗವಾಗಿ “ಮತ ಹಾಕು ದೇಶ ಕಟ್ಟು” ಎಂಬ ವಿಶೇಷ ಮಾನವ ಸರಪಳಿ ನಿರ್ಮಿಸಿ ಜಾಗ್ರತೆ ಮೂಡಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಉಮಾದೇವಿ ಬಸಾಪೂರ ಉದ್ಘಾಟಿಸಿ ಮಾತನಾಡಿ,ಚುನಾವಣೆಯಲ್ಲಿ ಎಲ್ಲರೂ ತಪ್ಪದೇ ಮತದಾನ ಮಾಡುವಂತೆ ಪ್ರೇರೇಪಿಸುವ ಮತ್ತು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.ವಿದ್ಯಾರ್ಥಿಗಳು ಜಾಥಾ ಮಾಡಿ ಮತದಾನದ ಜಾಗೃತಿ ಮೂಡಿಸಿದರು.ಮುಖ್ಯಾಧ್ಯಾಪಕ ಕುಮಾರ ಕೆ ಎಫ್ ಅಧ್ಯಕ್ಷತೆ ವಹಿಸಿದರು.
ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಚುನಾವಣಾ ಸಾಕ್ಷರತಾ ಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ರಂಗನಾಥ ವಾಲ್ಮೀಕಿ,ರತ್ನಾ ಹೆಗಡೆ,ನಾಗಪ್ಪ ಮನ್ನಿಕೆರಿ,ವೀಣಾ ಪಾಟೀಲ,ರತ್ನಾ ಹೆಗಡೆ,ನಿರ್ಮಲಾ ಶೆಟ್ಟರ,ರಂಗನಾಥ ವಾಲ್ಮೀಕಿ,ಪೂರ್ಣಿಮಾ ಕಟಗಿ,ಪೂರ್ಣಿಮಾ ಭಟ್ಟ,ಎಸ್ ಜಿ ಗಾಣಗಿ, ನಾಗಪ್ಪ ಮನ್ನಿಕೆರಿ,ಸಿಕಂದರಹೊಸಳ್ಳಿ,ಲಕ್ಷ್ಮಿ ಅಂಗಡಿ,ಮಲ್ಲಿಕಾರ್ಜುನ ದೊಡಮನಿ ಉಪಸ್ಥಿತರಿದ್ದರು.
Kshetra Samachara
20/01/2021 10:20 am