ನವಲಗುಂದ : ನವಲಗುಂದ ತಾಲೂಕಿನ ಕಾಲವಾಡ ಗ್ರಾಮದಲ್ಲಿ ಇಂದು ಗುರುಶಾಂತೇಶ್ವರರ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ಜರುಗಿತು.
ಜಾತ್ರೆಯ ಅಂಗವಾಗಿ ಶನಿವಾರ ಗ್ರಾಮದ ಗುರುಶಾಂತೇಶ್ವರ ಮಠ ಜಗಮಗಿಸುತ್ತಿತ್ತು, ಭಕ್ತರು ಮಠಕ್ಕೆ ಬಂದು ಭಕ್ತಿಯಿಂದ ಪೂಜೆಯನ್ನು ಸಹ ಸಲ್ಲಿಸಿದರು. ನಂತರ ಗ್ರಾಮದಲ್ಲಿ ರಥೋತ್ಸವದೊಂದಿಗೆ ಡೊಳ್ಳು ಕೂಡ ಜನರನ್ನು ತನ್ನತ್ತ ಸೆಳೆಯುತ್ತಿತ್ತು. ಇನ್ನು ಜಾತ್ರೆಗೆ ಕಾಲವಾಡ ಗ್ರಾಮ ಸೇರಿದಂತೆ ಸುತ್ತ ಮುತ್ತಲಿನ ಗ್ರಾಮದ ಸಾವಿರಾರು ಜನರು ಬಂದಿದ್ದರು.
Kshetra Samachara
16/01/2021 10:46 pm