ಕಲಘಟಗಿ:ಶಿಕ್ಷಕರು ಮನಸ್ಸು ಮಾಡಿದರೆ ಸಾವಿರಾರು ವಿವೇಕಾನಂದರನ್ನು ರೂಪಿಸಬಹುದು ಎಂದು ಹನ್ನೆರಡು ಮಠದ ಶ್ರೀ ರೇವಣಸಿದ್ಧ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.
ಅವರು ಜನತಾ ಇಂಗ್ಲಿಷ್ ಸ್ಕೂಲ್ ಆವರಣದಲ್ಲಿ ಆಯೋಜಿಸಿದ್ದ ವಿವೇಕಾನಂದರ ಜಯಂತಿಯ ಸಾನಿಧ್ಯ ವಹಿಸಿ ಆಶೀರ್ವಚನ ನೀಡಿ ಮಾತನಾಡಿದರು.ಸಂಸ್ಥೆಯ ಚೇರ್ ಮನ್ ಡಾ ಎಚ್. ಬಿ. ಪಾಟೀಲ ಅಧ್ಯಕ್ಷತೆ ವಹಿಸಿ ಮಾತನಾಡಿ, ವಿದ್ಯಾರ್ಥಿಗಳು ವಿವೇಕಾನಂದರ ಜೀವನದ ಆದರ್ಶಗಳನ್ನು ರೂಢಿಸಿಕೊಂಡು ದೇಶಕ್ಕೆ ಕೊಡುಗೆ ನೀಡಬೇಕೆಂದರು.
ನಿವೃತ್ತರಾದ ಜಿ.ಇ. ಕಾಲೇಜಿನ ಪ್ರಾಚಾರ್ಯ ಎಸ್.ಎಸ್. ಹಾವೇರಿ, ಎಸ್. ವಿ. ತಡಸಮಠ,ಶಿಕ್ಷಕ ಎಂ ಎಸ್ ಕಾಟೆ ಹಾಗೂ ಎಸ್.ಎಸ್.ಎಲ್.ಸಿ.ಯಲ್ಲಿ ಗರಿಷ್ಠ ಅಂಕ ಪಡೆದ ವಿದ್ಯಾರ್ಥಿಗಳನ್ನು ಸತ್ಕರಿಸಲಾಯಿತು.ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಕೆ. ಬಿ. ಪಾಟೀಲಕುಲಕರ್ಣಿ ಸದಸ್ಯ ಎಸ್.ಎಸ್. ಸಾವುಕಾರ,ಮಹಾದೇವಪ್ಪ ವರದಾನಿ,ಪ್ರಾಚಾರ್ಯೆ ಎನ್.ವಿ. ಹಿರೇಗೌಡ್ರ, ಆಡಳಿತಾಧಿಕಾರಿ ಬಿ ಎಚ್ ಪಾಟೀಲ, ಮುಖ್ಯೋಪಾಧ್ಯಾಯರಾದ ಶ್ರೀಧರ ಪಾಟೀಲಕುಲಕರ್ಣಿ, ಕೆ ಐ ಕೊಂಗಿ ಉಪಸ್ಥಿತರಿದ್ದರು.
Kshetra Samachara
16/01/2021 11:46 am