ನವಲಗುಂದ : ಇರುಮುಡಿಕಟ್ಟು ಇಲ್ಲದೆ ಅಯ್ಯಪ್ಪ ಭಕ್ತರು ಶಬರಿಮಲೆ ಸನ್ನಿಧಾನದ ಹದಿನೆಂಟು ಮೆಟ್ಟಲು ಏರಲು ಸಾಧ್ಯವಿಲ್ಲ ಎಂಬುದು ಎಲ್ಲರಿಗೂ ತಿಳಿದಿರೋ ವಿಷಯಾನೇ, ಈ ಹಿನ್ನಲೆ ಸೋಮವಾರ ನವಲಗುಂದ ಪಟ್ಟಣದ ಅಳಗವಾಡಿ ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಮಾಲಾಧಾರಿಗಳಿಗೆ ಇರುಮುಡಿಕಟ್ಟು ಕಟ್ಟುವ ಪೂಜೆ ಜರುಗಿತು.
ಇನ್ನು ಗ್ರಾಮದಲ್ಲಿನ 30 ಕ್ಕೂ ಹೆಚ್ಚು ಅಯ್ಯಪ್ಪ ಸ್ವಾಮಿ ಮಾಲಾಧಾರಿಗಳು ಗ್ರಾಮದ ಅಯ್ಯಪ್ಪ ಸ್ವಾಮಿ ದೇವಸ್ಥಾನದಲ್ಲಿ ಇರುಮುಡಿಕಟ್ಟು ಭಕ್ತಿಯಿಂದ ಭಜನಾ ಪದ ಹಾಡಿ ಪೂಜೆ ಸಲ್ಲಿಸಿದರು. ಈ ವೇಳೆ ಗ್ರಾಮದ ಭಕ್ತರು ಸಾಗರೋಪಾದಿಯಲ್ಲಿ ದೇವಸ್ಥಾನಕ್ಕೆ ಬಂದಿದ್ದರು.
Kshetra Samachara
04/01/2021 10:09 pm