ಹುಬ್ಬಳ್ಳಿ- ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯ ಮತ್ತು ಧರ್ಮಸ್ಥಳ ದಂತ ಮಹಾವಿದ್ಯಾಲಯ ಹಾಗು ರಾಷ್ಟೀಯ ಸ್ವಯಂ ಸೇವಾದಳ ಜಂಟಿಯಾಗಿ ಹೊಸವರ್ಷದ ಮೊದಲನೆಯ ದಿನದ ಪ್ರಯುಕ್ತ ಸಸಿ ನಡುವ ಕಾರ್ಯಕ್ರಮ, ರಕ್ತದಾನ ಶಿಬಿರ ಹಾಗು ಉದ್ಯಾನವನದ ಸಿಬ್ಬಂದಿಗೆ ಉಡುಗೊರೆಯನ್ನು ನೀಡುವ ಮೂಲಕ ವಿಶೇಷವಾಗಿ ಆಚರಿಸಿದರು.
ಈ ಕಾರ್ಯಕ್ರಮದಲ್ಲಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ವಿಶ್ವವಿದ್ಯಾಲಯದ ಉಪಕುಲಪತಿ ಡಾ. ನಿರಂಜನ ಕುಮಾರ, ಪದ್ಮಲತಾ ನಿರಂಜನ, ಕುಲಸಚಿವ ಡಾ. ದಿನೇಶ್, ಪರ ಉಪಕುಲಪತಿ ಜೀವಂಧರ ಕುಮಾರ್, ಆಡಳಿತದ ನಿರ್ದೇಶಕರಾದ ಸಾಕೇತ್ ಶೆಟ್ಟಿ ಹಾಗೂ ದಂತ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಬಲರಾಮ ನಾಯಕ್ ಉಪಸ್ಥಿತರಿದ್ದರು.....
Kshetra Samachara
01/01/2021 08:39 pm