ಹುಬ್ಬಳ್ಳಿ: ಯುವ ಬ್ರಿಗೇಡ್ ಹುಬ್ಬಳ್ಳಿ ಸಂಯುಕ್ತ ಆಶ್ರಯದಲ್ಲಿ, ರಾಮಕೃಷ್ಣ ವಿವೇಕಾನಂದ ಆಶ್ರಮ ಕಲ್ಯಾಣ ನಗರ ಸಭಾಂಗಣದಲ್ಲಿ ರಾಕ್ ಡೇ - ವಿವೇಕ ಮಾಲೆ ಧಾರಣೆ ಕಾರ್ಯಕ್ರಮ ಹಮ್ಮಿಕೊಂಡಿದ್ದರು.
ಡಿಸೆಂಬರ್ 25ರಂದು ಸ್ವಾಮಿ ವಿವೇಕಾನಂದರು ಕನ್ಯಾಕುಮಾರಿಯ ಸಮುದ್ರದ ಮಧ್ಯೆ ಇರುವ ಬಂಡೆಯ ಮೇಲೆ ಕುಳಿತು, ಭಾರತದ ಉನ್ನತಿಗಾಗಿ ಧ್ಯಾನ ಗೈದ ಈ ಪವಿತ್ರ ದಿನ ಎಂದು ಯುವ ಬ್ರಿಗೇಡ್ ರಾಜ್ಯದೆಲ್ಲಡೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ವಿವೇಕಾನಂದರ ಆದರ್ಶಗಳನ್ನು ಚಿಂತನೆಗಳನ್ನು ಎಲ್ಲ ಯುವ ಜನತೆಗೆ ತಲುಪಿಸುವ ಹಾಗೂ ಹಲವಾರು ಕಲ್ಯಾಣಿ, ನದಿಗಳನ್ನು ಸ್ವಚ್ಛಗೊಳಿಸಿ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ಯುವ ಜನಾಂಗವನ್ನು ತೊಡಗಿಸಿ ಮಾದರಿಯಾಗಿದ್ದಾರೆ ಎಂದು ಕಾರ್ಯಕ್ರಮದಲ್ಲಿ ತಿಳಿಸಲಾಯಿತು.
ಇದೇ ಸಂದರ್ಭದಲ್ಲಿ ಮಂಜುನಾಥೇಶ್ವರ ಸೆಂಟ್ರಲ್ ಸ್ಕೂಲ್ ನಲ್ಲಿ ಐದನೇ ತರಗತಿ ರೇವತಿ ಅನಿಲಕುಮಾರ , ಹಾಗೂ ಪಿಯುಸಿ ವಿದ್ಯಾರ್ಥಿನಿ ಪ್ರಗತಿ ಅನಿಲಕುಮಾರ ಹಾಡಿರುವ ಪ್ರಾರ್ಥನೆ ಗೀತೆ ಕಾರ್ಯಕ್ರಮಕ್ಕೆ ಇನ್ನಷ್ಟು ಮೆರುಗು ತಂದಿತು.
ಈ ಕಾರ್ಯದಲ್ಲಿ ಯುವ ಬ್ರಿಗೇಡ್ ಸಂಚಾಲಕ ಪ್ರಶಾಂತ,ನಾಗಲಿಂಗ,ವಿವೇಕ ಬಿರದಾರ,ಮಂಜುನಾಥ್, ಹರ್ಷ ಕುಬೇಳ್ಳಿ ಇನ್ನಿತರರು ಭಾಗಿಯಾಗಿದ್ದರು.
Kshetra Samachara
29/12/2020 04:02 pm