ನವಲಗುಂದ : ಪಂಡಿತ ಅಜಾತಶತ್ರು, ವಿದ್ವಾನ, ಶಿಲ್ಪಿ, ಕೀರ್ತನ ಕೇಸರಿ, ವೇದಬ್ರಹ್ಮ ಶ್ರೀ ಕಾಳಿದಾಸಚಾರ್ಯ ವಿಶ್ವಜ್ನ ಇವರ ಸಮಾಜಮುಖಿ ಸೇವೆ ಅಮೋಘ ಎಂದು ನಾಗಲಿಂಗಮಠದ ವೀರೇಂದ್ರ ಸ್ವಾಮೀಜಿ ಹೇಳಿದ್ರು.
ನಗರದ ಜೋಶಿ ಪ್ಲಾಟನಲ್ಲಿ ವಿಶ್ವಜ್ನ ಭವನದಲ್ಲಿ ನಡೆದ ಶ್ರೀ ಗಾಯತ್ರೀ ಹಾಗೂ ವಿಶ್ವಕರ್ಮ ಪೂಜೆ, ಬಾಗಿನ ಅರ್ಪಣೆ, ಕಾಳಿದಾಸಚಾರ್ಯ ಕುರಿತಾದ ಪುಸ್ತಕ ಬಿಡುಗಡೆ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು ಬಹುಮುಖಿ ಪ್ರತಿಭೆ ಕಾಳಿದಾಸಚಾರ್ಯ ಇಲಕಲ್ಲದಲ್ಲಿ ಸುಮಾರು ವರ್ಷಗಳ ಕಾಲ ಕೀರ್ತನೆ ಮಾಡಿ ಅಂದಿನ ಶ್ರೀ ಮಹಾಂತ ಶಿವಯೋಗಿಗಳ ಪರಮಭಕ್ತರಾಗಿದ್ದರು. ನವಲಗುಂದದ ಗವಿಮಠ, ನಾಗಲಿಂಗಮಠ ಅಪಾರ ಸೇವೆ ಮಾಡಿದ್ದಾರೆ. ಆರ್ಥಿಕ ಸಂಕಷ್ಟದ ಕಾಲದಲ್ಲಿ ಸಮಾಜಕ್ಕೆ ಹಲವಾರು ಗ್ರಂಥಮಾಲೆಗಳ್ಳನ್ನ ಬಿಡುಗಡೆ ಮಾಡಿದ ಮಹಾನ ಮೇಧಾವಿಯಾಗಿದ್ದರು ಎಂದು ಹೇಳಿದರು.
ಈ ಸಂದರ್ಭದಲ್ಲಿ ರವೀಂದ್ರ ವಿಶ್ವಜ್ಞ, ಗೀತಾ ವಿಶ್ವಜ್ಞ, ರತ್ನಾ ವಿಶ್ವಜ್ಞ, ಶಾಂತಾ ಮನ್ವಾಚಾರ, ಭಾರತಿ ಯರಕದ, ಎಲ್. ಎಚ್. ಕಮ್ಮಾರ, ಅನ್ನಪೂರ್ಣ ಮನ್ವಾಚಾರ, ಶಾಂತಾ ಹವಳಕೋಡ, ಆನಂದ ಹೆಬಸೂರ, ಜಗದೀಶ ಬೆಟ್ದೂರು, ಎನ್. ಎಚ್. ಖುದಾನವರ, ಎನ್. ಬಿ. ಬಡಿಗೇರ, ಎನ್. ಆರ್. ಬಡಿಗೇರ, ವಸಂತ ಖನ್ನೂರ ಹಾಗೂ ಸಮಾಜದ ಅನೇಕ ಬಾಂಧವರು ಉಪಸ್ಥಿತರಿದ್ದರು.
Kshetra Samachara
27/09/2020 12:01 pm