ನವಲಗುಂದ : ನಾಡ ಹಬ್ಬ ದಸರಾ ಸಡಗರ ಜನರ ಮನೆ ಮನಗಳಲ್ಲಿ ಬೆರೆತು ಹೋಗಿದೆ. ಹಬ್ಬದ ತಯಾರಿಯಲ್ಲಿ ಈಗಾಗಲೇ ಸಾರ್ವಜನಿಕರು ಮಾರುಕಟ್ಟೆಯತ್ತ ಆಗಮಿಸುತ್ತಲೇ ಇದ್ದಾರೆ. ಬೆಲೆ ಏರಿಕೆ ನಡುವೆಯೂ ದಸರಾ ಹಬ್ಬದ ವ್ಯಾಪಾರದಲ್ಲಿ ನವಲಗುಂದ ಜನತೆ ಸಂಪೂರ್ಣ ಮುಳುಗಿ ಹೋಗಿದ್ದರು.
ನವಲಗುಂದ ಪಟ್ಟಣದ ಹೃದಯ ಭಾಗದಲ್ಲಿರುವ ಗಾಂಧಿ ಮಾರುಕಟ್ಟೆಯಲ್ಲಿ ಬೆಳಿಗ್ಗೆ ಸಾರ್ವಜನಿಕರ ಆಗಮನ ಕಡಿಮೆ ಇತ್ತು. ಮಧ್ಯಾಹ್ನದ ವೇಳೆ ಜನರ ಆಗಮನ ಹೆಚ್ಚುತ್ತಿದೆ. ಸಂಜೆ ವೇಳೆಗೆ ಇನ್ನಷ್ಟು ಜನ ದಟ್ಟನೆ ಉಂಟಾಗುವ ಸಾಧ್ಯತೆಗಳು ಸಹ ಇದೆ.
ಈ ರೀತಿಯ ಸಡಗರ ಈಗ ವ್ಯಾಪಾರಸ್ತರಲ್ಲೂ ನಿಟ್ಟುಸಿರು ಬಿಡುವಂತೆ ಮಾಡಿದೆ. ಭರ್ಜರಿ ವ್ಯಾಪಾರದಿಂದ ಅಂಗಡಿದಾರರು ಸಹ ದಸರಾ ಹಬ್ಬದ ಸಂತಸದಲ್ಲಿದ್ದಾರೆ ಎಂದರೂ ತಪ್ಪಾಗಲಾರದ್ದು...
Kshetra Samachara
04/10/2022 01:29 pm