ಹುಬ್ಬಳ್ಳಿ: ಶ್ರೀ ವಿಘ್ನೇಶ್ವರನಿಗೆ ಎಲ್ಲೆಡೆ ಕರಿಗಡಬು, ಉಂಡೆ- ಚಕ್ಕುಲಿ, ಮೋದಕ ಮಾತ್ರವಲ್ಲದೆ ತರತರದ ಹಣ್ಣುಹಂಪಲು ನೈವೇದ್ಯ ಇಡುವುದನ್ನು ನೋಡಿದ್ದೇವೆ. ಆದರೆ, ಇಲ್ಲೊಂದು ಕುಟುಂಬ ಚಿಕನ್- ಮಟನ್ ಬಿರಿಯಾನಿ ಜೊತೆಗೆ ನಾನಾ ನಾನ್ ವೆಜ್ ಭಕ್ಷ್ಯ ತಯಾರಿಸಿ ಶಿವ-ಪಾರ್ವತಿ ಸುತನಿಗೆ ನೈವೇದ್ಯ ಮಾಡಿ ಪೂಜಿಸುತ್ತಿದೆ!
ಹುಬ್ಬಳ್ಳಿ ಬಮ್ಮಾಪುರ ಓಣಿಯಲ್ಲಿ ಸೋಮವಂಶ ಸಹಸ್ರಾರ್ಜುನ ಕ್ಷತ್ರೀಯ ಸಮುದಾಯದ ಪ್ರತಿಭಾ ಪವಾರ್ ಮತ್ತವರ ಸಹೋದರರ ಕುಟುಂಬಗಳು ಗಣೇಶ ಚತುರ್ಥಿಯನ್ನು ವಿಶಿಷ್ಟವಾಗಿ ಆಚರಣೆ ಮಾಡುತ್ತಿದ್ದಾರೆ.
ಈ ಕುಟುಂಬದವರು ಗಣೇಶಮೂರ್ತಿ ಪ್ರತಿಷ್ಠಾಪಿಸಿ ಐದು ದಿನಗಳ ಕಾಲ ವಿಶೇಷ ಪೂಜೆ ಸಲ್ಲಿಸುತ್ತಾರೆ. ಮೊದಲ ಎರಡು ದಿನ ಎಲ್ಲರಂತೆ ಸಿಹಿ ತಿಂಡಿ-ತಿನಿಸು ನೈವೇದ್ಯ ಸಲ್ಲಿಸುತ್ತಾರೆ. ಮೂರನೇ ದಿನವಾದ ಇಂದು ಮಾತ್ರ ಗಣಪನಿಗೆ ನಾನ್ ವೆಜ್ ಅಡುಗೆಯೇ ನೈವೇದ್ಯ! ಚಿಕನ್- ಮಟನ್, ಮೊಟ್ಟೆಯ ನೈವೇದ್ಯ ಮಾಡಿ ಭಕ್ತಿ ಭಾವದಿಂದ ಪೂಜಿಸಿದ್ದಾರೆ.
ಈ ಕುಟುಂಬದವರು ಮೂಲತಃ ಮಹಾರಾಷ್ಟ್ರದವರಾಗಿದ್ದು ಮಾಂಸಾಹಾರಿ ಹೋಟೆಲ್ ನಡೆಸಿಕೊಂಡು ಬಂದಿದ್ದಾರೆ. ಈ ಭಾಗದಲ್ಲಿ ಸಾವಜಿ ಖಾನಾವಳಿ ಎಂದೇ ಪ್ರಸಿದ್ಧಿ. ಸಾವಜಿ ಖಾನಾವಳಿ ನಾನ್ ವೆಜ್‍ಗೆ ಫೇಮಸ್ ಕೂಡ ಆಗಿದೆ. ಹೀಗಾಗಿ ತಮ್ಮ ಉದ್ಯೋಗದಲ್ಲಿ ಇನ್ನಷ್ಟು ಶ್ರೇಯಸ್ಸು ಸಿಗಲಿ... ಅಂತ ನಾನ್ ವೆಜ್ ನೈವೇದ್ಯ ಗಣೇಶನಿಗೆ ಇಡುತ್ತಾರೆ. ಈ ಪದ್ಧತಿ ಇಂದು ನಿನ್ನೆಯದ್ದಲ್ಲ. ಹಿರಿಯರ ಕಾಲದಿಂದಲೂ ನಡೆದುಕೊಂಡು ಬಂದಿದೆಯಂತೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
02/09/2022 09:24 pm