ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಣ್ಣಿಗೇರಿ: ಶಲವಡಿಯಲ್ಲಿ ವೈಭವದಿಂದ ನೆರವೇರಿದ ದುರ್ಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ

ಅಣ್ಣಿಗೇರಿ: ತಾಲೂಕಿನ ಶಲವಡಿ ಗ್ರಾಮದ ಸಿದ್ದಲಿಂಗೇಶ್ವರ ನಗರದಲ್ಲಿ ದುರ್ಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮವು ಭಾರಿ ವೈಭವದಿಂದ ನೆರವೇರಿತು.

ದೇವಿಯ ಪ್ರಾಣ ಪ್ರತಿಷ್ಠಾಪನೆ ಮುನ್ನಾದಿನ ಗ್ರಾಮದಲ್ಲಿ ದೇವಿಯ ಮೂರ್ತಿ ಮೆರವಣಿಗೆ ನಡೆಯಿತು. ಗ್ರಾಮದ ಗುರು ಹಿರಿಯರು, ಯುವಕರು ಮೆರವಣಿಗೆಗೆ ಮೆರಗು ತಂದರು. ಇನ್ನು ಮಂಗಳವಾರ ವಿವಿಧ ಪೂಜೆಗಳ ಮೂಲಕ ದುರ್ಗಮ್ಮ ದೇವಿ ಮೂರ್ತಿ ಪ್ರತಿಷ್ಠಾಪನೆ ನೆರವೇರಿಸಲಾಯಿತು. ಈ ವೇಳೆ ಸಾವಿರಾರು ಭಕ್ತರು ದೇವಿಯ ದರ್ಶನ ಪಡೆದುಕೊಂಡು ಪುನೀತರಾದರು. ದೇವಸ್ಥಾನಕ್ಕೆ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿತ್ತು.

Edited By : Nagesh Gaonkar
Kshetra Samachara

Kshetra Samachara

24/08/2022 10:34 pm

Cinque Terre

52.27 K

Cinque Terre

0

ಸಂಬಂಧಿತ ಸುದ್ದಿ