ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಅ.5 ರಂದು ಶ್ರೀಚಕ್ರದ ಪ್ರತಿಷ್ಠಾಪನೆ ನಿಮಿತ್ತ ಕಾರ್ಯಕ್ರಮ

ನವಲಗುಂದ : ನಾಗರ ಪಂಚಮಿ ಹಬ್ಬದ ಪ್ರಯುಕ್ತವಾಗಿ ನವಲಗುಂದ ಪಟ್ಟಣದ ಶ್ರೀ ಶ್ರೀಚಕ್ರ ಧಾರಿಣಿ ಬಳ್ಳಾರಿ ಶ್ರೀ ದುರ್ಗಾದೇವಿ ದೇವಸ್ಥಾನದಲ್ಲಿ ಆಗಸ್ಟ್ ಐದರಂದು ಶ್ರೀಚಕ್ರದ ಪ್ರತಿಷ್ಠಾಪನೆ ಹಿನ್ನೆಲೆ ಹೋಮ ಪೂಜೆ, ಮಂಗಳಾರತಿ, ಜಾನಪದ ನುಡಿಮುತ್ತು ಕಾರ್ಯಕ್ರಮ ಜರುಗಲಿದೆ.

ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಬೃಹನ್ಮಠ ಅನ್ನೂರ-ರಾಜೂರ-ಗದಗ ಪೂಜ್ಯ ಶ್ರೀ ಷ.ಬ್ರ. ಅಭಿನವ ಪಂಚಾಕ್ಷರ ಶಿವಾಚಾರ್ಯ ಮಹಾಸ್ವಾಮಿಗಳು ವಹಿಸಿಕೊಳ್ಳುವರು. ಶುಕ್ರವಾರ ಬೆಳಿಗ್ಗೆ 8:10 ರಿಂದ 10.10 ರವರೆಗೆ ಹೋಮ ಪೂಜೆ ಹಾಗೂ ಮಧ್ಯಾಹ್ನ 12.45 ಗಂಟೆಗೆ ಮಹಾಮಂಗಳಾರತಿ ಜಾರುಗುವುದು.

ಮಧ್ಯಾಹ್ನ 2:30 ರ ನಂತರ ಜಾನಪದ ನುಡಿಮುತ್ತು ಹಾಗೂ ದೇವಸ್ಥಾನದ ಭಕ್ತಾದಿಗಳಿಂದ ಸಂಗೀತ ಸಾರ ಕಾರ್ಯಕ್ರಮ ಜರುಗಲಿದೆ.

Edited By : PublicNext Desk
Kshetra Samachara

Kshetra Samachara

04/08/2022 05:22 pm

Cinque Terre

14.13 K

Cinque Terre

0

ಸಂಬಂಧಿತ ಸುದ್ದಿ