ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಭಾವೈಕ್ಯತೆಯ ಹಬ್ಬದಿಂದ ಯರಗುಪ್ಪಿ ಗ್ರಾಮಸ್ಥರಲ್ಲಿ ಆನಂದ

ಕುಂದಗೋಳ: ಹಿಂದೂ ಮುಸ್ಲಿಂ ಭಾವೈಕ್ಯತೆಯ ಸಂಕೇತ ಎಂಬಂತೆ ಈ ವರ್ಷ ರಂಜಾನ್ ಹಾಗೂ ಬಸವಜಯಂತಿ ಹಬ್ಬಗಳು ಒಂದೇ ದಿನ ಆಚರಣೆ ಒಳಪಟ್ಟಿದ್ದು, ಈ ಹಬ್ಬಗಳ ಸಂಭ್ರಮ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ವಿಶೇಷ ಎನಿಸಿದೆ.

ರಂಜಾನ್ ಹಬ್ಬದ ಅಂಗವಾಗಿ ಮುಸ್ಲಿಂ ಬಾಂಧವರು ಮಸೀದಿಗೆ ಪ್ರಾರ್ಥನೆ ಸಲ್ಲಿಸಿ ಬಳಿಕ ಯರಗುಪಿ ಗ್ರಾಮದ ಬಸವೇಶ್ವರ ದೇವಸ್ಥಾನಕ್ಕೆ ಆಗಮಿಸಿ ಹಿಂದೂ ಬಾಂಧವರು ನೀಡಿದ ತಂಪು ಪಾನೀಯ ಸವಿದು ಹಿಂದೂ ಮುಸ್ಲಿಂ ಭಾವೈಕ್ಯತೆಯ ತೋರಿದರು.

ಇನ್ನೂ ಮುಸ್ಲಿಂ ಬಾಂಧವರು ತಮ್ಮ ರಂಜಾನ್ ಹಬ್ಬದ ದಿನ ಮಾಂಸ ಆಹಾರ ಸೇವನೆ ಮಾಡದೆ ಕೇವಲ ಸಿಹಿ ಸವಿದು ಬಸವಜಯಂತಿ ಸಾರವನ್ನು ಸಾರಿದರು.

Edited By : Manjunath H D
Kshetra Samachara

Kshetra Samachara

03/05/2022 09:56 pm

Cinque Terre

21.83 K

Cinque Terre

6

ಸಂಬಂಧಿತ ಸುದ್ದಿ