ಧಾರವಾಡ: ಧಾರವಾಡ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ಮಂಗಳವಾರ ಬಸವ ಜಯಂತಿಯನ್ನು ಸಂಭ್ರಮದಿಂದ ಆಚರಣೆ ಮಾಡಲಾಯಿತು.
ಬಸವ ಜಯಂತಿ ಅಂಗವಾಗಿ ಜೋಡೆತ್ತುಗಳ ಮೆರವಣಿಗೆ ಮಾಡಲಾಯಿತು. ಸದ್ಯ ಕೃಷಿ ಚಟುವಟಿಕೆಗಳನ್ನು ಮುಗಿಸಿರುವ ರೈತಾಪಿ ವರ್ಗ ಬಸವ ಜಯಂತಿ ಆಚರಣೆಯಲ್ಲಿ ಎತ್ತು, ಟ್ರ್ಯಾಕ್ಟರ್‌ಗಳನ್ನು ತೆಗೆದುಕೊಂಡು ಬಂದು ಭಾಗಿಯಾಗಿದ್ದರು.
ಬಸವೇಶ್ವರರ ಫೋಟೋ ಜೊತೆಗೆ ಛತ್ರಪತಿ ಶಿವಾಜಿ ಮಹಾರಾಜರ ಫೋಟೋ ಕೂಡ ಇಟ್ಟು ಅದ್ಧೂರಿ ಮೆರವಣಿಗೆ ಮಾಡಲಾಯಿತು. ಬಸವೇಶ್ವರರು ಹಾಗೂ ಶಿವಾಜಿ ಜಯಂತಿ ಆಚರಣೆ ಮಾಡುವ ಮೂಲಕ ಶಿವ-ಬಸವ ಜಯಂತಿಯನ್ನಾಗಿ ಆಚರಣೆ ಮಾಡಿದರು. ಇದಕ್ಕೂ ಮುನ್ನ ಗ್ರಾಮದ ಯಲ್ಲಮ್ಮ ದೇವಿ ದೇವಸ್ಥಾನದಿಂದ ಗ್ರಾಮದ ಹಿರಿಯರು ಮೆರವಣಿಗೆಗೆ ಚಾಲನೆ ನೀಡಿದರು.
Kshetra Samachara
03/05/2022 09:32 pm