ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ:ತಾಲೂಕಿನೆಲ್ಲಡೆ ಶಾಂತಿಯುತವಾಗಿ ಬಸವ ಜಯಂತಿ ಹಾಗೂ ರಂಜಾನ್ ಆಚರಣೆ

ಅಳ್ನಾವರ: ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲ ಗ್ರಾಮಗಳಲ್ಲಿ ಬಸವೇಶ್ವರ ಜಯಂತಿ ಹಾಗೂ ಪವಿತ್ರ ರಂಜಾನ್ ಹಬ್ಬವನ್ನು ಅತ್ಯಂತ ಸರಳ ಮತ್ತು ಶಾಂತಿಯುತವಾಗಿ ಆಚರಿಸಲಾಯಿತು.

ಒಂದೇ ದಿನ ಎರಡು ಹಬ್ಬಗಳನ್ನ ಆಚರಿಸುವುದು ಬಹಳ ವಿಶೇಷವಾಗಿದೆ.ಜನರಲ್ಲಿ ಭಾವೈಕ್ಯತೆ ಮೂಡಿಸುವ ಇಂತಹ ಹಬ್ಬಗಳು ಒಂದೇ ದಿನ ಆಚರಣೆ ಮಾಡುವುದು ಅತ್ಯಂತ ಸಂತಸದ ಸಂಗತಿ ಎಂದು ಸಾರ್ವಜನಿಕರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಕಳೆದೆರಡು ವರ್ಷದಿಂದ ಕೊರೊನಾ, ಲಾಕ್ ಡೌನ್ ನಿಂದಾಗಿ ಜನ ತತ್ತರಿಸಿ ಹೋಗಿದ್ದರು. ಈ ವರ್ಷ ಅದ್ಯಾವುದೂ ಇಲ್ಲದೇ ಸಂತಸದಿಂದ ಹಬ್ಬವನ್ನು ಆಚರಿಸುತ್ತಿರುವುದು ತುಸು ಹೆಚ್ಚೇ ಖುಷಿ ನೀಡಿದೆ.

ರಾಜ್ಯದಲ್ಲಿ ಹಿಜಾಬ್ ಗದ್ದಲ, ಧರ್ಮ ಸಂಘರ್ಷಣೆ ಸಾಕಷ್ಟು ಗೊಂದಲಗಳ ನಡುವೆ ಸರಳ ಮತ್ತು ಶಾಂತಿಯುತವಾಗಿ ಎರಡು ಹಬ್ಬಗಳನ್ನು ಆಚರಿಸಿದ್ದು ವಿಶೇಷವಾಗಿತ್ತು.

ಮಹಾಂತೇಶ ಪಠಾಣಿ, ಪಬ್ಲಿಕ್ ನೆಕ್ಸ್ಟ್, ಅಳ್ನಾವರ

Edited By : Manjunath H D
Kshetra Samachara

Kshetra Samachara

03/05/2022 07:57 pm

Cinque Terre

50.9 K

Cinque Terre

2

ಸಂಬಂಧಿತ ಸುದ್ದಿ