ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಹಿಂದೂ ಮುಸ್ಲಿಂ ಭಾವೈಕ್ಯತೆಯ ಹನುಮ ಜಯಂತಿ

ಕುಂದಗೋಳ : ಹಿಂದೂ ಮುಸ್ಲಿಂ ಬಾಂಧವರು ಒಂದುಗೂಡಿ ಕುಂದಗೋಳ ಪಟ್ಟಣದಲ್ಲಿ ವಿಭಿನ್ನವಾಗಿ ಹನುಮ ಜಯಂತಿಯನ್ನು ಆಚರಿಸಲಾಯಿತು.

ಕುಂದಗೋಳ ಪಟ್ಟಣದ ಮೂರಂಗಡಿ ಕೂಟ್ ಬ್ರಹ್ಮಲಿಂಗೇಶ್ವರ ದೇವಸ್ಥಾನದಿಂದ ನಡೆದ ಆಂಜನೇಯನ ಬೃಹತ್ ಭವ್ಯ ಮೂರ್ತಿ ಮೆರವಣಿಗೆಗೆ ಕುಂದಗೋಳ ಮುಸ್ಲಿಂ ಬಾಂಧವರು ಸ್ವಯಂ ಭಕ್ತಿ ಪ್ರೀತಿಯಿಂದ ಎರೆಡು ಅಡಿ ಎತ್ತರದ ಆಂಜನೇಯನ ಮೂರ್ತಿ ಕೊಡುಗೆ ನೀಡಿ ಭಾವೈಕ್ಯತೆಗೆ ಸಾಕ್ಷಿಯಾಗಿದ್ದಾರೆ.

ಹನುಮ ಜಯಂತಿ ಹಾಗೂ ಆಂಜನೇಯ ಜಾತ್ರಾ ಮಹೋತ್ಸವದ ಭವ್ಯ ಮೆರವಣಿಗೆಗೆ ಕಾಂಗ್ರೆಸ್ ಮುಖಂಡ ರಮೇಶ್ ಕೊಪ್ಪದ ಪಾರಿವಾಳ ಹಾರಿ ಬಿಟ್ಟು, ಯುವಕರ ಜೊತೆ ಕುಣಿದು ಕುಪ್ಪಳಿಸಿದರು.

ಮುಸ್ಲಿಂ ಸಮಾಜದ ಮುಖಂಡ ಮೊಹಮ್ಮದ ಸಲೀಂ ಕ್ಯಾಲಕೊಂಡ ಹಾಗೂ ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ದಿಲೀಪ್ ಕಲಾಲ್ ಹಾಗೂ ಸರ್ವ ಕುರಬಗೇರಿ ಹಿರಿಯರು ಮುಸ್ಲಿಂ ಸಮಾಜದ ಬಾಂಧವರು ಭಾಗವಹಿಸಿ ಮರೆಯದ ಕ್ಷಣಕ್ಕೆ ಸಾಕ್ಷಿಯಾದರು.

ಬ್ರಹ್ಮಲಿಂಗೇಶ್ವರ ದೇವಸ್ಥಾನದಿಂದ ಹೊರಟ ಮೆರವಣಿಗೆ ಸಂಪೂರ್ಣ ಕುಂದಗೋಳ ಪಟ್ಟಣದಲ್ಲಿ ಸಂಚರಿಸಿ ಭಕ್ತಿ ಭಾವೈಕ್ಯತೆಗೆ ಸಾಕ್ಷಿಯಾಯಿತು.

Edited By : Nagesh Gaonkar
Kshetra Samachara

Kshetra Samachara

17/04/2022 06:29 pm

Cinque Terre

40.38 K

Cinque Terre

3

ಸಂಬಂಧಿತ ಸುದ್ದಿ