ಧಾರವಾಡ: ಧಾರವಾಡ ತಾಲೂಕು ನರೇಂದ್ರ ಗ್ರಾಮದಲ್ಲಿ ಶ್ರೀ ಮಳೆಪ್ಪಜ್ಜ ಹಾಗೂ ಮಹಾಂತ ಶಿವಯೋಗಿಗಳ ಜಾತ್ರಾ ಮಹೋತ್ಸವ ಭಕ್ತಿ-ಭಾವದಿಂದ ನೆರವೇದಿದೆ. ಮಳೆಪ್ಪಜ್ಜನ ಮಠದಿಂದ ತೇರು ಎಳೆದ ಗ್ರಾಮದ ಭಕ್ತರು ಪುನೀತರಾದರು. ಊರಿನ ಯುವಕರ ಜಾಂಜ್ ಮೇಳ, ಡೊಳ್ಳು ಹಾಗೂ ಜಾನಪದ ಕಲಾತಂಡಗಳು ಜಾತ್ರೆಯ ಮೆರವಣಿಗೆಯ ವೈಭವ ಹೆಚ್ಚಿಸಿದ್ದವು.
ಜಾತ್ರೆಯ ದಿವ್ಯ ಸಾನಿಧ್ಯ ವಹಿಸಿದ್ದ ಮಳೆಪ್ಪಜ್ಜನ ಮಠದ ಶ್ರೀ ಸಂಗಮೇಶ ಮಹಾಸ್ವಾಮಿಗಳು, ಲೋಕಕಲ್ಯಾಣಕ್ಕಾಗಿ ಹಾಗೂ ಅನ್ನದಾತರ ಹಿತಕ್ಕಾಗಿ ಮಹಾಂತ ಶಿವಯೋಗಿಗಳ ಆಶೀರ್ವಾದ ಸದಾಕಾಲ ಇರುತ್ತದೆ ಎಂದರು.
ಈ ಊರಿನಲ್ಲಿ ಪ್ರತಿವರ್ಷ ಜಾತ್ರೆಯ ದಿನ ತೇರು ಮುಂದೆ ಸಾಗುತ್ತಲೇ ತುಂತುರು ಮಳೆಯಾಗುವ ವಾಡಿಕೆ ಇದೆ. ಇದು ಪ್ರಕೃತಿ ವೈಶಿಷ್ಟ್ಯವೂ ಹೌದು. ಸಿದ್ಧಿಪುರುಷ ಮಳೆಪ್ಪಜ್ಜನ ಆಶೀರ್ವಾದವೂ ಹೌದು ಎನ್ನುತ್ತಾರೆ ಗ್ರಾಮಸ್ಥರು. ಆದ್ರೆ ಈ ಬಾರಿಯ ಇಡೀ ಜಾತ್ರೆಯುದ್ದಕ್ಕೂ ನಿರಂತರ ಮಳೆಯಾಗಿದೆ. ಸತತ ಮಳೆಯ ನಡುವೆಯೂ ಜಗ್ಗದ ಜನ ಜಾತ್ರೆಯ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದಾರೆ.
ಒಟ್ಟಾರೆ ಕೋವಿಡ್ ಕಾರಣದಿಂದ ಕಳೆದೆರಡು ವರ್ಷ ಸಾಂಕೇತಿಕವಾಗಿ ಆಚರಿಸಲ್ಪಟ್ಟಿದ್ದ ಮಳೆಪ್ಪಜ್ಜನ ಜಾತ್ರೆ ಈ ಬಾರಿ ಸಾವಿರಾರು ಭಕ್ತರ ಸಹಭಾಗಿತ್ವದಲ್ಲಿ ಸಂಭ್ರಮದಿಂದ ನಡೆದಿದೆ.
Kshetra Samachara
17/04/2022 03:22 pm