ಧಾರವಾಡ: ಸುರಿಯುವ ಮಳೆಯಲ್ಲೇ ಧಾರವಾಡ ತಾಲೂಕಿನ ಯಾದವಾಡ ಗ್ರಾಮಸ್ಥರು ಆಂಜನೇಯನ ತೇರನ್ನೆಳೆದಿದ್ದಾರೆ.
ಇಂದು ಹನುಮ ಜಯಂತಿಯಾಗಿದ್ದರಿಂದ ಅನೇಕ ಕಡೆಗಳಲ್ಲಿ ವೀರಾಂಜನೇಯನ ರಥೋತ್ಸವ ನಡೆದಿದೆ. ಅದೇ ರೀತಿ ಧಾರವಾಡ ತಾಲೂಕಿನ ಯಾದವಾಡ ಗ್ರಾಮದಲ್ಲೂ ಆಂಜನೇಯನ ರಥೋತ್ಸವವಿತ್ತು.
ಸಂಜೆ 5 ಗಂಟೆಯ ಸುಮಾರಿಗೆ ಭಕ್ತರೆಲ್ಲರೂ ಸೇರಿ ತೇರು ಎಳೆಯುವ ಸಂದರ್ಭದಲ್ಲೇ ಮಳೆ ಬರಲಾರಂಭಿಸಿತು. ಮಳೆಯನ್ನೂ ಲೆಕ್ಕಿಸದೇ ಭಕ್ತ ಸಮೂಹ ಆಂಜನೇಯನ ತೇರನ್ನು ಎಳೆದು ಪುನೀತರಾಗಿದ್ದಾರೆ.
ಇನ್ನು ರಥೋತ್ಸವದಲ್ಲಿ ಕರಡಿ ಮೇಳ, ಜಗ್ಗಲಿಗೆ ಮೇಳ, ಪುರವಂತರ ಮೇಳದವರೂ ಪಾಲ್ಗೊಂಡು ರಥೋತ್ಸವದ ಮೆರಗು ಹೆಚ್ಚಿಸಿದರು.ಅಲ್ಲಿ ಸೇರಿದ್ದ ಭಕ್ತರು ತೇರಿಗೆ ಉತ್ತತ್ತಿ, ಬಾಳೆಹಣ್ಣುಗಳನ್ನು ತೂರಿ ಭಕ್ತಿಯ ನಮನ ಸಲ್ಲಿಸಿದರು.
Kshetra Samachara
16/04/2022 08:41 pm