ನವಲಗುಂದ: ಯುಗಾದಿ ಹಬ್ಬದ ನಿಮಿತ್ತ ನವಲಗುಂದ ಪಟ್ಟಣದಲ್ಲಿ ಬೃಹತ್ ಮೆರವಣಿಗೆ ಆಯೋಜಿಸಲಾಗಿತ್ತು. ಸಚಿವ ಶಂಕರ ಪಾಟೀಲ ಮುನೇನಕೊಪ್ಪ ಮೆರವಣಿಗೆಗೆ ಚಾಲನೆ ನೀಡಿದರು. ಇನ್ನು ಮೆರವಣಿಗೆಯಲ್ಲಿ ಡಿಜೆ ಹಚ್ಚಿದ ಯುವಕರು ಕುಣಿದು ಕುಪ್ಪಳಿಸಿ, ಸಂಭ್ರಮಿಸಿದರು.
ಧಾರ್ಮಿಕ ದತ್ತಿ ಇಲಾಖೆ, ನವಲಗುಂದ ಶ್ರೀ ಗಣಪತಿ ದೇವಸ್ಥಾನ, ಧಾರವಾಡ ಜಿಲ್ಲಾಡಳಿತ, ನವಲಗುಂದ ತಾಲೂಕಾಡಳಿತ ಸಹಯೋಗದಲ್ಲಿ 2022ರ ಯುಗಾದಿ ಹಬ್ಬ, ರಾಜ್ಯ ಧಾರ್ಮಿಕ ದಿನಾಚರಣೆ ನಿಮಿತ್ತ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮೂಲಕ ಸಂಚರಿಸುತ್ತಾ ನವಲಗುಂದ ಜನತೆ ಸಂಭ್ರಮಿಸಿದ್ದಾರೆ.
Kshetra Samachara
02/04/2022 09:36 pm