ಕುಂದಗೋಳ: ತಾಲೂಕಿನ ಗುಡಗೇರಿ ಗ್ರಾಮದಲ್ಲಿ ಯುಗಾದಿ ಹಬ್ಬದ ಪಾಂಡ್ಯ ದಿನ ತ್ರಿಕಾಲ ಜ್ಞಾನಿ ಸಂಗಮೇಶ್ವರ ಜಾತ್ರಾ ಮಹೋತ್ಸವ ಅತಿ ಭಕ್ತಿ ಭಾವದಿ ಸಡಗರದಿಂದ ನೆರವೇರಿತು.
ಸಂಗಮೇಶ್ವರ ಜಾತ್ರಾ ಮಹೋತ್ಸವದಲ್ಲಿ ರಥೋತ್ಸವ ಕಾರ್ಯಕ್ರಮ ಅತಿ ವಿಜೃಂಭಣೆಯಿಂದ ನೆರವೇರಿ ಗುಡಗೇರಿ ಬಸವೇಶ್ವರನ ಪಾದಗಟ್ಟಿವರೆಗೂ ರಥೋತ್ಸವ ತಲುಪಿತು. ಭಕ್ತಾದಿಗಳು ರಥೋತ್ಸವಕ್ಕೆ ಹೂ ಹಣ್ಣು ಸಮರ್ಪಿಸಿ ಪುನೀತರಾದರು. ಅದರಂತೆ ಇಂದು ಬೆಳಿಗ್ಗೆ ಸಂಗಮೇಶ್ವರನಿಗೆ ಪೂಜಾಭಿಷೇಕ ಸಲ್ಲಿಸಿದ್ದರು.
ಜಾತ್ರೆಯಲ್ಲಿ ಸಂಗಮೇಶ್ವರರ ಭಾವಚಿತ್ರ ಮೆರವಣಿಗೆ ನಡೆಯಿತು, ಜಾತ್ರೆಯಲ್ಲಿ ಶ್ರೀ ಮಡಿವಾಳೇಶ್ವರ ಸ್ವಾಮೀಜಿಗಳು ಕಲ್ಮಠ ಸಂಗಮೇಶ್ವಮಠ ಗುಡಗೇರಿ, ಹಾಗೂ ವಿರಕ್ತಮಠ ಹೊಳೆ ಇಟಗಿ ಸಾನಿಧ್ಯದಲ್ಲಿ ರಥೋತ್ಸವದಲ್ಲಿ ಸಕಲ ಭಕ್ತಾದಿಗಳು ಪಾಲ್ಗೊಂಡು ಪ್ರಸಾದ ಪಡೆದರು.
Kshetra Samachara
02/04/2022 08:32 pm