ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: ಹೋಳಿ ಆಚರಿಸಿದ ಪೊಲೀಸರು- ಮಹಿಳಾ ಸಿಬ್ಬಂದಿ ಸೆಲ್ಫಿ ಕ್ರೇಜ್

ಹುಬ್ಬಳ್ಳಿ: ದಿನವೂ ಖಾಕಿ ಬಟ್ಟೆ ಧರಿಸಿಕೊಂಡು ಡ್ಯೂಟಿ ಮಾಡುತ್ತಿದ್ದ ಖಾಕಿ ಪಡೆ ಇಂದು ಕರ್ತವ್ಯದ ಜೊತೆಗೆ ಹೋಳಿ ಹಬ್ಬ ಆಚರಿಸಿದ್ದು, ರಂಗಪಂಚಮಿ ಹಬ್ಬವನ್ನು ಸಂಭ್ರಮಿಸಿತು. ಅಲ್ಲದೇ ಪೊಲೀಸ್ ಮಹಿಳಾ ಸಿಬ್ಬಂದಿ ಪರಸ್ಪರ ಬಣ್ಣ ಹಚ್ಚಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಳ್ಳುವ ಮೂಲಕ ಹೋಳಿ ಹಬ್ಬವನ್ನು ಸಂಭ್ರಮಿಸಿದರು.

ಹುಬ್ಬಳ್ಳಿಯ ಚೆನ್ನಮ್ಮ ವೃತ್ತದಲ್ಲಿಂದು ಮಹಿಳಾ ಪೊಲೀಸ್ ಸಿಬ್ಬಂದಿ ಕರ್ತವ್ಯದ ಜೊತೆಗೆ ಬಣ್ಣ ಹಚ್ಚಿಕೊಂಡು ಸೆಲ್ಫಿ ಕ್ಲಿಕ್ಕಿಸಿಕೊಂಡು ಸಂಭ್ರಮಿಸಿದರು. ಅಲ್ಲದೇ ಸಾರ್ವಜನಿಕರೊಂದಿಗೆ ಕೂಡ ಸೌಜನ್ಯತೆಯಿಂದ ಬಣ್ಣದ ಹಬ್ಬವನ್ನು ಆಚರಿಸಿದರು. ಕೆಲಸದ ಒತ್ತಡದ ನಡುವೆಯೂ ಸಾಂಪ್ರದಾಯಿಕ ಆಚರಣೆ ಮಾಡಿದ್ದು, ಮಹಿಳಾ ಸಿಬ್ಬಂದಿ ಸೆಲ್ಫಿ ಕ್ರೇಜ್ ನಿಜಕ್ಕೂ ನೋಡುಗರಲ್ಲಿ ಕುತೂಹಲವನ್ನು ಉಂಟು ಮಾಡಿದ್ದಂತೂ ಸತ್ಯ.

Edited By : Nagesh Gaonkar
Kshetra Samachara

Kshetra Samachara

22/03/2022 03:42 pm

Cinque Terre

71.15 K

Cinque Terre

11

ಸಂಬಂಧಿತ ಸುದ್ದಿ