ನವಲಗುಂದ : ನವಲಗುಂದದಲ್ಲಿ ಹೋಳಿ ಹುಣ್ಣಿಮೆಯ ಕಾಮಣ್ಣನ ಪ್ರತಿಷ್ಠಾಪನೆ, ಬಣ್ಣದ ಹಬ್ಬ ಅಂದ್ರೆ ಅದು ವಿಶೇಷ. ಇಂತಹ ಓಕುಳಿಗೆ ಈಗ ನವಲಗುಂದದ ಜನರು ಸಜ್ಜಾಗಿದ್ದು, ಪಟ್ಟಣದಲ್ಲಿ ಬಣ್ಣದ ಮಾರಾಟ ಮತ್ತು ಖರೀದಿ ಜೋರಾಗಿಯೇ ಇತ್ತು.
ಹೌದು ನಾಳೆ ನವಲಗುಂದದಲ್ಲಿ ಬಣ್ಣದ ಹಬ್ಬ ನಡೆಯಲಿದ್ದು, ನವಲಗುಂದದ ಪ್ರಮುಖ ಮಾರುಕಟ್ಟೆಯಾದ ಗಾಂಧೀ ಮಾರುಕಟ್ಟೆಯಲ್ಲಿ ಬಣ್ಣಗಳ ಮಾರಾಟ ಬಲು ಜೋರಾಗಿಯೇ ನಡೆದಿತ್ತು. ಬೆಳಿಗ್ಗೆಯಿಂದಲೇ ಬಣ್ಣ, ತಮಟೆ, ಸೇರಿದಂತೆ ವಿವಿಧ ವೇಷಗಳ ಖರೀದಿಗೆ ಜನರು ಮುಂದಾಗಿದ್ದರು. ಕಳೆದ ವರ್ಷ ಕಳೆಗುಂದಿದ್ದ ಬಣ್ಣದ ಓಕುಳಿ ಈ ಬಾರಿ ವಿಜೃಂಭಣೆಯಿಂದ ನಡೆಯಲಿದೆ.
Kshetra Samachara
18/03/2022 07:59 pm