ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ರಾಮಲಿಂಗ ಕಾಮಣ್ಣನ ದರ್ಶನ,ಆಡಳಿತ ಮಂಡಳಿಯಿಂದ ಕಟ್ಟುನಿಟ್ಟಿನ ಕ್ರಮ

ನವಲಗುಂದ : ಸುಪ್ರಸಿದ್ಧ ರಾಮಲಿಂಗ ಕಾಮಣ್ಣನ ದರ್ಶನ ಇಂದಿನಿಂದ ಆರಂಭವಾಗಿದೆ. ಭಕ್ತರು ದರ್ಶನಕ್ಕಾಗಿ ಗಂಟೆಗಟ್ಟಲೆ ಸಾಲುಗಟ್ಟಿ ನಿಂತು ಕಾಯುತ್ತಿದ್ದಾರೆ. ದೇವಸ್ಥಾನದ ಆಡಳಿತ ಮಂಡಳಿಯಿಂದ ಕಟ್ಟುನಿಟ್ಟಿನ ಕ್ರಮಗಳನ್ನು ಸಹ ಕೈಗೊಳ್ಳಲಾಗಿದ್ದು, ಪಟ್ಟಣದಲ್ಲಿ 200 ಕ್ಕೂ ಅಧಿಕ ಪೊಲೀಸ್ ನೇಮಕ ಮಾಡಲಾಗಿದೆ.

ಇನ್ನು ಮಾರ್ಚ್ 14 ಸೋಮವಾರ ಏಕಾದಶಿ ದಿನ ರಾತ್ರಿ ಪೂಜೆಯೊಂದಿಗೆ ಕಾಮದೇವರ ಪ್ರತಿಷ್ಠಾಪನೆಗೊಂಡು, ದ್ವಾದಶಿದಿನ ಅಂದರೆ 15 ಮಂಗಳವಾರ ಬೆಳಿಗ್ಗೆ ಕಾಮದೇವರ ದರ್ಶನ ಲಭ್ಯವಾಗುತ್ತದೆ. ನಂತರ 18 ಶುಕ್ರವಾರದಂದು ಹುಣ್ಣಿಮೆಯನ್ನು ಆಚರಿಸಿ, 19 ಶನಿವಾರದಂದು ಓಕುಳಿ (ಬಣ್ಣದಾಟ) ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ನಂತರ ಕಾಮದೇವರ ದಹನ ನಡೆಯುವುದು.

Edited By :
Kshetra Samachara

Kshetra Samachara

15/03/2022 02:45 pm

Cinque Terre

23.88 K

Cinque Terre

0

ಸಂಬಂಧಿತ ಸುದ್ದಿ