ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರವಾಡದಲ್ಲಿ ರಣ ಹಲಿಗೆಗಳ ಸದ್ದು

ಧಾರವಾಡ: ಧಾರವಾಡದಲ್ಲಿ ಹೋಳಿ ಹುಣ್ಣಿಮೆ ಮುನ್ನಾ ದಿನ ರಣ ಹಲಿಗೆಗಳು ಸದ್ದು ಮಾಡಿವೆ.

ಹೀಗೆ ಹಲಿಗೆಗಳನ್ನು ಬಾರಿಸುತ್ತ ಹೆಜ್ಜೆ ಹಾಕುತ್ತಿರುವ ಯುವಕರ ಪಡೆ.. ಮತ್ತೊಂದೆಡೆ ಬಣ್ಣದ ತುಪಾಕಿಗಳನ್ನು ಹಾರಿಸುತ್ತಿರುವ ಯುವಕರು ಈ ಎಲ್ಲ ದೃಶ್ಯಗಳು ಕಂಡು ಬಂದಿದ್ದು ಧಾರವಾಡದ ಕಾಮನಕಟ್ಟೆ ಪ್ಯಾಟಿ ಓಣಿಯಲ್ಲಿ.

ಹೋಳಿ ಹುಣ್ಣಿಮೆ ಮುನ್ನಾ ದಿನ ಹಲಿಗೆ ಹಬ್ಬವನ್ನು ಹಮ್ಮಿಕೊಳ್ಳಲಾಗಿತ್ತು. ಧಾರವಾಡ ಕಾಮನಕಟ್ಟೆಯಲ್ಲಿ ಹಲಿಗೆ ಹಬ್ಬ ಹಮ್ಮಿಕೊಂಡಿದ್ದರಿಂದ ಪ್ರತಿಯೊಬ್ಬರೂ ಹಲಿಗೆಗಳನ್ನು ತಂದು ಬಾರಿಸಿದರು. ಸ್ವತಃ ಶಾಸಕ ಅಮೃತ ದೇಸಾಯಿ ಕೂಡ ಹಲಿಗೆ ಹಬ್ಬದಲ್ಲಿ ಪಾಲ್ಗೊಂಡು ಹಲಿಗೆ ಬಾರಿಸಿದರು. ಒಟ್ಟಾರೆಯಾಗಿ ಹೋಳಿ ಹುಣ್ಣಿಮೆ ಮುನ್ನಾ ದಿನ ಧಾರವಾಡದಲ್ಲಿ ರಣ ಹಲಿಗೆಗಳು ಸದ್ದು ಮಾಡಿದ್ದು, ಕೊರೊನಾ ನಂತರ ಎಲ್ಲರೂ ಒಟ್ಟಿಗೆ ಸೇರಿ ಹಲಿಗೆ ಹಬ್ಬ ಆಚರಿಸಿದ್ದು ಗಮನಸೆಳೆಯಿತು.

Edited By : Manjunath H D
Kshetra Samachara

Kshetra Samachara

14/03/2022 07:22 pm

Cinque Terre

21.05 K

Cinque Terre

0

ಸಂಬಂಧಿತ ಸುದ್ದಿ