ಕುಂದಗೋಳ: ಮಾ.18ರಂದು ಹೋಳಿ ಹುಣ್ಣಿಮೆ ಸಂಭ್ರಮ. ಈ ಹಬ್ಬವನ್ನು ಸರಳವಾಗಿ ಆಚರಿಸಿ, ಯಾವುದೇ ಅಹಿತಕರ ಘಟನೆ ಸಂಭವಿಸದಂತೆ ಎಚ್ಚರ ವಹಿಸುವುದು ಕುಂದಗೋಳ ಪಟ್ಟಣದ ನಾಗರಿಕರ ಆದ್ಯ ಕರ್ತವ್ಯ ಎಂದು ಪಿಎಸ್ಐ ಪಾಟೀಲ ಹೇಳಿದರು.
ಅವರು ಕುಂದಗೋಳ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಕುಂದಗೋಳದ ಪ್ರಮುಖರ ಹೋಳಿ ಹಬ್ಬದ ಶಾಂತಿಸಭೆ ಕರೆದು ಮಾತನಾಡಿದರು.
ಹೋಳಿ ಆಚರಣೆಯನ್ನು ರಾಸಾಯನಿಕ ಬಣ್ಣ ಹಾಗೂ ಅಹಿತಕರ ಘಟನೆ ಜರುಗದಂತೆ ಹಿಂದೂ- ಮುಸ್ಲಿಂ ಭಾವೈಕ್ಯತೆಯ ಹಬ್ಬವಾಗಿ ಆಚರಿಸಿ. ಧ್ವನಿವರ್ಧಕ ಹಾಗೂ ಇತರ ಚಟುವಟಿಕೆ ಕೈಗೊಂಡು ಸಾರ್ವಜನಿಕರ ಜೀವನಕ್ಕೆ ತೊಂದರೆ ಕೊಡುವ ಪರಿಸ್ಥಿತಿ ನಿರ್ಮಾಣ ಆಗಬಾರದು ಎಂದರು.
ಈ ಸಂದರ್ಭ ಉಪಸ್ಥಿತರಿದ್ದ ಪ.ಪಂ. ಅಧ್ಯಕ್ಷರು, ಕುಂದಗೋಳ ನಾಗರಿಕರು, ವ್ಯಾಪಾರಸ್ಥರು ಪಿಎಸ್ಐ ಅವರ ಮಾತಿಗೆ ಸಹಮತ ಸೂಚಿಸಿದರು.
Kshetra Samachara
14/03/2022 02:01 pm