ನವಲಗುಂದ : ಶ್ರೀ ರಾಮಲಿಂಗೇಶ್ವರ ಕಾಮದೇವರ ಹೋಳಿ ಹಬ್ಬಕ್ಕೆ ಕ್ಷಣಗಣನೆ ಆರಂಭವಾಗಿದೆ. ಈ ಹಿನ್ನೆಲೆ ಸುಪ್ರಸಿದ್ದ ರಾಮಲಿಂಗೇಶ್ವರ ಕಾಮದೇವರ ಹೋಳಿ ಹಬ್ಬದ ಆಚರಣೆಗಳು ಈ ಬಾರಿ ಜರುಗಲಿದ್ದು, ನವಲಗುಂದ ಮಂದಿಯಲ್ಲಿ ಸಂಭ್ರಮ ಮನೆ ಮಾಡಿದೆ.
ಮಾರ್ಚ್ 14 ಸೋಮವಾರ ಏಕಾದಶಿ ದಿನ ರಾತ್ರಿ ಪೂಜೆಯೊಂದಿಗೆ ಕಾಮದೇವರ ಪ್ರತಿಷ್ಠಾಪನೆಗೊಂಡು, ದ್ವಾದಶಿದಿನ ಅಂದರೆ 15 ಮಂಗಳವಾರ ಬೆಳಿಗ್ಗೆ ಕಾಮದೇವರ ದರ್ಶನ ಲಭ್ಯವಾಗುತ್ತದೆ. ನಂತರ 18 ಶುಕ್ರವಾರದಂದು ಹುಣ್ಣಿಮೆಯನ್ನು ಆಚರಿಸಿ, 19 ಶನಿವಾರದಂದು ಓಕುಳಿ (ಬಣ್ಣದಾಟ) ರಾತ್ರಿ ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ, ನಂತರ ಕಾಮದೇವರ ದಹನ ನಡೆಯುವುದು.
Kshetra Samachara
06/03/2022 08:52 pm