ಹುಬ್ಬಳ್ಳಿ: ಇಲ್ಲಿನ ಕಲ್ಯಾಣನಗರದ ರಾಮಕೃಷ್ಣ ವಿವೇಕಾನಂದರ ಆಶ್ರಮದಲ್ಲಿ ಶ್ರೀರಾಮಕೃಷ್ಣ ಪರಮಹಂಸರ 187ನೇ ಜಯಂತ್ಯುತ್ಸವದ ಅಂಗವಾಗಿ ಗೌರವಾರ್ಪಣೆ ಹಾಗೂ ಸಂಗೀತ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಮನುಕುಲವನ್ನು ಆಧ್ಯಾತ್ಮಿಕ ಹಾಗೂ ಧಾರ್ಮಿಕ ಮಾರ್ಗದ ಮೂಲಕ ಉದ್ಧಾರ ಮಾಡುವ ಸದುದ್ದೇಶದಿಂದ ಶ್ರಮಿಸಿದ ಸಂತರ ಆದರ್ಶವನ್ನು ಎಲ್ಲರ ಅಂತರಾಳದಲ್ಲಿ ಬಿತ್ತುವಂತೆ ಮಾಡುವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
ಈ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರನ್ನು ಸನ್ಮಾನಿಸಲಾಯಿತು. ಅಲ್ಲದೇ ಖ್ಯಾತ ಉದ್ಯಮಿಗಳಾದ ವಿ.ಎಸ್.ವಿ ಪ್ರಸಾದ ಅವರ ಸಾಮಾಜಿಕ ಕೊಡುಗೆಯನ್ನು ಗುರುತಿಸಿ ಸನ್ಮಾನಿಸಿ ಅವರಿಗೆ ವಿವೇಕಾನಂದರ ಹಾಗೂ ರಾಮಕೃಷ್ಣ ಪರಮಹಂಸರ ಸ್ಮರಣ ಸಂಚಿಕೆಯನ್ನು ವಿತರಿಸಿ ಅಭಿನಂದನೆ ಸಲ್ಲಿಸಲಾಯಿತು. ಅಲ್ಲದೇ ಕಾರ್ಯಕ್ರಮದಲ್ಲಿ ಖ್ಯಾತ ಹಿಂದೂಸ್ತಾನಿ ಸಂಗೀತಗಾರರಾದ ಎಂ.ವೆಂಕಟೇಶ ಹಾಗೂ ಖ್ಯಾತ ತಬಲಾ ವಾದಕರಾದ ರಘುರಾಮ್ ನಾಕೋಡ್ ಸಂಗೀತ ಅಮೃತವನ್ನು ಸಾರ್ವಜನಿಕರಿಗೆ ಉಣಬಡಿಸಿದರು.
ಒಟ್ಟಿನಲ್ಲಿ ವಾಣಿಜ್ಯನಗರಿ ಜನರಲ್ಲಿ ಶ್ರೀರಾಮಕೃಷ್ಣ ಪರಮಹಂಸರ ಹಾಗೂ ಸ್ವಾಮಿ ವಿವೇಕಾನಂದರ ಆದರ್ಶಗಳನ್ನು ಮನಮುಟ್ಟುವಂತೆ ಮಾಡಲು ಈ ಕಾರ್ಯಕ್ರಮ ಸ್ಫೂರ್ತಿಯಾಗಿದ್ದಂತೂ ಸತ್ಯ. ಇಂತಹ ಕಾರ್ಯಕ್ರಮಗಳ ಮೂಲಕ ಯುವಪೀಳಿಗೆಗೆ ಸಾಧಕರ ಜೀವನಾದರ್ಶದ ಪರಿಚಯವಾಗಬೇಕಿದೆ.
ಹುಬ್ಬಳ್ಳಿ-ಧಾರವಾಡ ನೆಕ್ಸ್ಟ್
04/03/2022 11:04 pm