ಧಾರವಾಡ: ಕಲ್ಮೇಶ್ವರ, ಜಗದೀಶ್ವರ, ಸೋಮೇಶ್ವರ, ಪರಮೇಶ್ವರ ಎಂಬ ನಾನಾ ಹೆಸರುಗಳಿಂದ ಕರೆಯಿಸಿಕೊಳ್ಳುವ ಪರಶಿವನಿಗೆ ಶ್ರೇಷ್ಠವಾದ ದಿನ ಶಿವರಾತ್ರಿ. ಈ ಶಿವರಾತ್ರಿಯನ್ನು ಪರಶಿವನ ಆರಾಧನೆ ಮೂಲಕ ಆಚರಿಸಲಾಗುತ್ತದೆ. ಈಶ್ವರ ದೇವಸ್ಥಾನಗಳು ಇಂದು ಭಕ್ತರಿಂದ ತುಂಬಿ ತುಳುಕುತ್ತಿರುತ್ತವೆ. ಈ ಶ್ರೇಷ್ಠವಾದ ಶಿವರಾತ್ರಿ ಹಬ್ಬಕ್ಕೆ ಧಾರವಾಡದ ಪರಿಸರ ಸ್ನೇಹಿ ಕಲಾವಿದ ಮಂಜುನಾಥ ಹಿರೇಮಠ ಅವರು ನಾಡಿನ ಜನತೆಗೆ ವಿಶಿಷ್ಠ ರೀತಿಯಲ್ಲಿ ಶುಭಾಶಯ ಕೋರಿದ್ದಾರೆ.
ಕಲ್ಲಂಗಡಿ ಹಣ್ಣಿನಲ್ಲಿ ಪರಮೇಶ್ವರನ ಕಲಾಕೃತಿ ಕೆತ್ತುವ ಮೂಲಕ ಶಿವರಾತ್ರಿ ಹಬ್ಬದ ಶುಭಾಶಯ ಕೋರಿದ್ದಾರೆ. ಕಲ್ಲಂಗಡಿ ಹಣ್ಣಿನಲ್ಲಿ ಸೂಕ್ಷ್ಮವಾಗಿ ಪರಶಿವನ ಚಿತ್ರ ಕೆತ್ತಿರುವ ಹಿರೇಮಠ, ತಮ್ಮ ಕಲೆಯ ಮೂಲಕವೇ ಶಿವನಿಗೆ ಕಲಾ ಪೂಜೆ ಸಲ್ಲಿಸಿದ್ದಾರೆ.
Kshetra Samachara
01/03/2022 01:11 pm