ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಧಾರಾನಗರಿಯಲ್ಲಿ ಅಷ್ಟಾವರ್ಣದ ಚನ್ನಬಸವಣ್ಣನ ಮೂರ್ತಿ ಸ್ಥಾಪನೆ : ಶೀಘ್ರದಲ್ಲೇ ಅನಾವರಣ*

ಧಾರವಾಡ : ರೈಲ್ವೆ ನಿಲ್ದಾಣಕ್ಕೆ ಹೋಗುವ ಮಾರ್ಗದ ಹೆಡ್ ಪೋಸ್ಟ್‌ ಕಚೇರಿ ಬಳಿ ಉಳವಿ ಚನ್ನಬಸವೇಶ್ವರ ಧರ್ಮಫಂಡ್ ಸಂಸ್ಥೆ ತನ್ನ ಸ್ವಂತ ಖರ್ಚಿನಲ್ಲಿ, ಅಷ್ಟಾವರಣದ ಆಕಾರದ ಮೇಲೆ 9 ಅಡಿಯ ಕಂಚಿನ ಚನ್ನಬಸವಣ್ಣನ ಪ್ರತಿಮೆ ನಿರ್ಮಾಣವಾಗಿದ್ದು, ಜೊತೆಗೆ ವೃತ್ತದ ಸಂಪೂರ್ಣ ಕಾಮಗಾರಿ ಮುಕ್ತಾಯಗೊಂಡಿದ್ದು, ಶೀಘ್ರದಲ್ಲೇ ಅನಾವರಣಗೊಳ್ಳಲು ಸಿದ್ದವಾಗಿದೆ.

ನಗರದ ಮಾಳಮಡ್ಡಿ ಹತ್ತಿರ ಇರುವ ಐತಿಹಾಸಿಕ ಉಳವಿ ಚನ್ನಬಸವಣ್ಣ ದೇವಸ್ಥಾನದಿಂದ ಅನತಿ ದೂರದಲ್ಲಿರುವ ಹೆಡ್ ಪೋಸ್ಟ್‌ ಕಚೇರಿ ಬಳಿಯ ವೃತ್ತದಲ್ಲಿ 9 ಅಡಿಯ ಬಸವಣ್ಣನ ಕಂಚಿನ ಪ್ರತಿಮೆ ಅನಾವರಣಗೊಳ್ಳಲು ಸಿದ್ದವಾಗಿದೆ. ಅಷ್ಟಾವರಣದ ಆಕಾರದಲ್ಲಿ ವೃತ್ತ ನಿರ್ಮಾಣವಾಗಿದೆ. ಇನ್ನೂ ಬಸವಣ್ಣನ ಕಂಚಿನ ಪ್ರತಿಮೆಯನ್ನು ಕೊಲ್ಲಾಪುರದ ಪ್ರಸಿದ್ದ ಕಲಾವಿದರೊಬ್ಬರಿಂದ ವಿನ್ಯಾಸಗೊಳಿಸಲಾಗಿದೆ.

ಉಳವಿ ಚನ್ನಬಸಣ್ಣ ಮೂರ್ತಿ ಬಹುಕಾಲದ ಕನಸಿನ ಪ್ರತಿಮೆಯಾಗಿತ್ತು, 2004 ರಿಂದ ಉಳವಿ ಚನ್ನಬಸಣ್ಣ ದೇವಸ್ಥಾನ ಸಮಿತಿಯು 12 ಅಡಿ ಉದ್ದದ ದೊಡ್ಡ ಮೂರ್ತಿಯನ್ನು ನಿರ್ಮಿಸಲು ಮೊದಲೇ ಯೋಜಿಸಲಾಗಿತ್ತು, ಇದೀಗ ಕಾಮಗಾರಿ ಪೂರ್ಣಗೊಂಡಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರಿಂದ ದಿನಾಂಕ ನಿಗದಿಪಡಿಸಿಕೊಂಡು ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು. ಕಾರ್ಯಕ್ರಮವನ್ನು ಅದ್ದೂರಿಯಾಗಿ ನೇರವೆರಿಸುವದರ ಜೊತೆಗೆ ಬಸವಣ್ಣವರ ಇತಿಹಾಸ ತಿಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗುವುದು ಎಂದು ದೇವಸ್ಥಾನದ ಧರ್ಮದರ್ಶಿ ಟಿ.ಎಲ್.ಪಾಟೀಲ ತಿಳಿಸಿದರು.

Edited By : Manjunath H D
Kshetra Samachara

Kshetra Samachara

11/11/2021 03:53 pm

Cinque Terre

18.42 K

Cinque Terre

1

ಸಂಬಂಧಿತ ಸುದ್ದಿ