ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ: ಜಗಮಗ ಸೂಜಿಗದ ಗುಡೇನಕಟ್ಟಿ ಗ್ರಾಮದ ನವರಾತ್ರಿ ಮಹೋತ್ಸವ

ಕುಂದಗೋಳ : ಕುಂಭ ಕೊಡ ಹೊತ್ತ ಮಹಿಳೆಯರ ಭಕ್ತಿಯ ಸಾಲು, ಡೊಳ್ಳಿನ ಮೇಳಗಳು, ಯುವಕರ ಟಪ್ಪಾ ಗುಚ್ಚಿ ಸ್ಟೇಪ್ಸ್ ಭಕ್ತಿ ಸಾಕ್ಷಾತ್ಕಾರದ ದ್ಯಾಮವ್ವ ದೇವಿಯ ಚಕ್ಕಡಿ ಮೆರವಣಿಗೆಯ ಜಗ ಮಗ ಸೂಜಿಗ ಎನಿಸುವ ಹಬ್ಬದ ವಾತಾವರಣಕ್ಕೆ ಇಂದು ಗುಡೇನಕಟ್ಟಿ ಗ್ರಾಮ ಸಾಕ್ಷಿಯಾಗಿತ್ತು.

ಶರನ್ನವರಾತ್ರಿ ಮಹೋತ್ಸವದ ಅಂಗವಾಗಿ ಪ್ರತಿ ವರ್ಷವೂ ವೈಶಿಷ್ಟ್ಯ ಆಚರಣೆ ಕೈಗೊಳ್ಳುವ ಗುಡೇನಕಟ್ಟಿ ಗ್ರಾಮಸ್ಥರು ಇಂದು ನವರಾತ್ರಿ ಒಂಬತ್ತನೇ ದಿನದ ಅಂಗವಾಗಿ ದಿಂಗಾಲೇಶ್ವರ ಶ್ರೀಗಳಿಂದ ಪ್ರವಚನ ಪುರಾಣ ಆರಂಭಿಸಿ ಕಲ್ಯಾಣಪುರಪುರದ ಶ್ರೀಗಳು ಹಿತವಚನ ಕೇಳಿ ಡಾ.ಎ.ಸಿ.ವಾಲಿ ಗುರುಗಳ ಹಿತೋಪದೇಶ ಆಲಿಸಿ ಪುನೀತರಾದರು.

ಇಡೀ ಗ್ರಾಮದ ಜನರು ಒಕ್ಕರಲಾಗಿ ನಿಂತು ನವರಾತ್ರಿಯ ಒಂಬತ್ತನೇ ದಿನವನ್ನು ಸಡಗರದಿಂದ ಆಚರಿಸಿ, ಸರ್ವರಿಗೂ ತನು ಮನದಿಂದ ಇಷ್ಟಾರ್ಥ ಸಿದ್ಧಿಸುವಂತೆ ಪ್ರಾರ್ಥನೆ ಮಾಡಿ ಬಣ್ಣಿಮಹಾಕಾಳಿಗೆ ಮಹಾಪೂಜೆ ಅನ್ನಸಂತರ್ಪಣೆ ಕಾರ್ಯಕ್ರಮ ನೆರವೇರಿಸಿದರು.

Edited By : Manjunath H D
Kshetra Samachara

Kshetra Samachara

15/10/2021 09:51 pm

Cinque Terre

68.12 K

Cinque Terre

0

ಸಂಬಂಧಿತ ಸುದ್ದಿ