ನವಲಗುಂದ : ಉತ್ತರ ಕರ್ನಾಟಕದ ಎರಡು ಸುಪ್ರಸಿದ್ದ ಗಣೇಶನ ದೇವಸ್ಥಾನಗಳಲ್ಲಿ ಒಂದಾದ ನವಲಗುಂದ ಗಣಪತಿ ದೇವಸ್ಥಾನದಲ್ಲಿ ಪ್ರತಿವರ್ಷ ಆಚರಿಸಲಾಗುತ್ತಿದ್ದ ಗಣೇಶ ಚತುರ್ಥಿಗೆ ಕಳೆದ ಎರಡು ವರ್ಷಗಳಿಂದ ಕೊರೋನಾ ಕರಿ ಛಾಯೆ ಆವರಿಸಿದ್ದು, ಈ ಬಾರಿಯು ಸಂಭ್ರಮದ ಕೊರತೆ ಕಾಣುತ್ತಿದೆ.
ಹೌದು ಕಳೆದ ಎರಡು ವರ್ಷಗಳಿಗಿಂತ ಮೊದಲು ಪ್ರತಿವರ್ಷ ಒಂಬತ್ತು ದಿನಗಳ ಕಾಲ ಈ ದೇವಸ್ಥಾನದಲ್ಲಿ ಗಣಪನನ್ನು ಕೂರಿಸಿ, ಒಂಬತ್ತು ದಿನವೂ ಸಹ ರಥೋತ್ಸವವನ್ನು ನೆರವೇರಿಸಲಾಗುತ್ತಿತ್ತು. ಆದರೆ ಈ ಬಾರಿ ಕೋವಿಡ್ ಹಿನ್ನಲೆ ಸರ್ಕಾರದ ಮಾರ್ಗಸೂಚಿಗಳನ್ನು ಪಾಲಿಸುವ ನಿಟ್ಟಿನಲ್ಲಿ ಗಣಪತಿ ದೇವಸ್ಥಾನದ ಆಡಳಿತ ಮಂಡಳಿಯು ರಥೋತ್ಸವವನ್ನು ರದ್ದು ಮಾಡಿದ್ದಾರೆ. ಈ ದೇವಸ್ಥಾನದ ವೈಶಿಷ್ಟತೆಯ ಬಗ್ಗೆ ದೇವಸ್ಥಾನದ ಆಡಳಿತ ಮಂಡಳಿಯವರು ಹೇಳಿದ್ದು ಹೀಗೆ...
Kshetra Samachara
10/09/2021 10:57 pm