ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕುಂದಗೋಳ : ಮುಂಡರ್ ಜೋಕಾಲಿ ಆಟ, ಸ್ಲೋ ಬೈಕ್ ಓಟ, ನಾಗರ ಪಂಚಮಿ ಹಬ್ಬದೂಟ

ಕುಂದಗೋಳ : ಈ ಗ್ರಾಮೀಣ ಭಾಗದಲ್ಲಿ ಹಬ್ಬಗಳ ಆಚರಣೆ ಸೊಬಗೆ ಬೇರೆ, ಅಲ್ಲಿ ಹಬ್ಬ ಬಂತೆಂದರೇ ಸಾಕು ಆ ಹಬ್ಬದ ಜೊತೆ ಯುವಕರ ವಿಶೇಷ ಆಟಗಳ ಉತ್ಸಾಹ ಹುಮ್ಮಸ್ಸು ಇದ್ದೇ ಇರುತ್ತದೆ.

ಅದರಂತೆ ಇಂದು ಕುಂದಗೋಳ ತಾಲೂಕಿನ ಬರದ್ವಾಡ ಗ್ರಾಮದಲ್ಲಿ ನಾಗರ ಪಂಚಮಿ ಅಂಗವಾಗಿ ಮುಂಡರ್ ಜೋಕಾಲಿ ಕಟ್ಟಿ ಆ ಜೋಕಾಲಿ ಏರಲು ಹವಣಿಸುವ ಯುವಕರ ಪ್ರಯತ್ನಗಳ ನೋಟ ಕ್ಷಣಕಾಲ ನೋಡುಗರನ್ನು ರಂಜಿಸುತ್ತಾ ಹಾಸ್ಯದ ಹೊಣಲಿಗೆ ತಳ್ಳಿದವು.

ಎರೆಡು ಸಮ ಅಳತೆಯ ಹಗ್ಗಕ್ಕೆ ಏಣಿಯಂತೆ ಕೋಲುಗಳನ್ನು ಕಟ್ಟಿ ಎರೆಡು ಹಗ್ಗದ ಕೊನೆಯ ಭಾಗಗಳನ್ನು ಎತ್ತರಕ್ಕೆ ಕಟ್ಟಿ ಮನುಷ್ಯ ಒಂದು ಭಾಗದಿಂದ ಮತ್ತೋಂದು ಭಾಗ ಪೂರ್ತಿ ಏರಿ ತಲುಪುವ ಪ್ರಯತ್ನವೇ ಈ ಮುಂಡರ್ ಜೋಕಾಲಿ ವಿಶೇಷತೆ. ಈ ವಿಶೇಷತೆಯನ್ನ ಅತಿ ಜಾಣ ದೇಹದ ತೂಕ ಸಮತೋಲನವಾಗಿ ಇರಿಸಿ ಮುಟ್ಟಬೇಕು ಹೀಗೆ ಮುಟ್ಟಿದವರಿಗೆ ಚಪ್ಪಾಳೆ ಜೊತೆ ಷರತ್ತು ಸಹ ಸಿಗುತ್ತವೆ.

ಈ ಜೋಕಾಲಿ ನಡುವೆ ನಿಧಾನವಾಗಿ ಬೈಕ್ ಓಡಿಸುವ ಸ್ಪರ್ಧೆ ಸಹ ಎಲ್ಲರೂ ಸ್ಪರ್ಧೆಗೆ ಇಳಿಯುವಂತೆ ಮಾಡಿತು, ಹಳ್ಳಿಗಳಲ್ಲಿ ಹಬ್ಬವೇಂದ್ರೆ ಜನರನ್ನು ಬೆಸೆಯುವ ಸುದಿನ ಎಂಬುದಕ್ಕೆ ಇಂದಿನ ದೃಶ್ಯಗಳು ಸಾಕ್ಷಿಯಾದವು.

Edited By : Manjunath H D
Kshetra Samachara

Kshetra Samachara

13/08/2021 08:33 pm

Cinque Terre

30.63 K

Cinque Terre

1

ಸಂಬಂಧಿತ ಸುದ್ದಿ