ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಕಲಘಟಗಿ: ಭೋಗೆನಾಗರಕೊಪ್ಪ ಶ್ರೀ ಬಸವಣ್ಣದೇವರ ಜಾತ್ರಾ ಮಹೋತ್ಸವ ಸರಳ ಆಚರಣೆಗೆ ನಿರ್ಧಾರ

ಕಲಘಟಗಿ: ತಾಲೂಕಿನ ಶೀ ಕ್ಷೇತ್ರ ಭೋಗೆನಾಗರಕೊಪ್ಪ ಶ್ರೀ ಬಸವಣ್ಣದೇವರ ಜಾತ್ರಾ ಮಹೋತ್ಸವನ್ನು ಸರಳವಾಗಿ ಹಾಗೂ ಸಾಂಕೇತಿಕವಾಗಿ ಆಚರಣೆ‌ ಮಾಡಲು ನಿರ್ಧಾರ ಮಾಡಲಾಗಿದೆ ಎಂದು ದೇವಸ್ಥಾನದ ಆಡಳಿತಾಧಿಕಾರಿ ಹಾಗೂ ಉಪ ತಹಶೀಲದಾರ ಬಿ.ಆಯ್.ಅಂಗಡಿ ತಿಳಿಸಿದರು.

ಅವರು ಪಬ್ಲಿಕ್ ‌ನೆಕ್ಸ್ಟ್ ಜತೆ ಮಾತನಾಡಿ‌,ಶ್ರೀ ಬಸವಣ್ಣದೇವರ ಜಾತ್ರೆ ಜನೇವರಿ 27 ರಿಂದ 29 ರವರೆಗೆ ನಡೆಯಲಿದ್ದು,ಆದರೆ ಈ ಬಾರಿ ಕೋವಿಡ್-19 ಮಹಾಮಾರಿ ಕರೋನಾ ಹಿನ್ನೆಲೆಯಲ್ಲಿ ಜಾತ್ರಾ ಕಾರ್ಯಕ್ರಮ ನಿಷೇಧಿಸಲಾಗಿದೆ.ಜನ ಸೇರುವುದಕ್ಕೆ ನಿರ್ಬಂಧ ಹೇರಲಾಗಿದ್ದು,ಸಾಂಕೇತಿಕವಾಗಿ ಹಾಗೂ ಸಾಂಪ್ರಾದಾಯಿಕವಾಗಿ ವಿಧಿ-ವಿಧಾನಗಳನ್ನು ನಡೆಸಲು ನಿರ್ಧರಿಸಲಾಗಿದೆ.

ಜಾತ್ರಾ ಮಹೋತ್ಸವ,ದಾಸೋಹ ಪ್ರಸಾದ ವ್ಯವಸ್ಥೆ,ಯಾವುದೇ ತರಹದ ಅಂಗಡಿಗಳು ಇರುವುದಿಲ್ಲ.ಭಕ್ತರು ಕಡ್ಡಾಯವಾಗಿ ಮಾಸ್ಕ್ ಧರಿಸಿ ದರ್ಶನ ಪಡೆಯ ಬಹುದು,ಸಾಮಾಜಿಕ ಅಂತರ ಕಡ್ಡಾಯ,ಸ್ಯಾನಿಟೈಜರ ಕಡ್ಡಾಯವಾಗಿ ತಂದಿರಬೇಕು‌ ಹಾಗೂ ಕಾಯಿ ಒಡೆಯಲಿಕ್ಕೆ ಅವಕಾಶ ಇರುವುದಿಲ್ಲಾ.ಈ ನಿಯಮಗಳನ್ನು ಪಾಲಿಸಲು ಸಮಸ್ತ ಭಕ್ತರಲ್ಲಿ ದೇವಸ್ಥಾನ ಆಡಳಿತಾಧಿಕಾರಿ ಬಿ.ಆಯ್.ಅಂಗಡಿ ವಿನಂತಿಸಿದ್ದಾರೆ.

Edited By : Manjunath H D
Kshetra Samachara

Kshetra Samachara

19/01/2021 07:47 pm

Cinque Terre

21.25 K

Cinque Terre

1

ಸಂಬಂಧಿತ ಸುದ್ದಿ