ಹುಬ್ಬಳ್ಳಿ : ಸಂಜೆ ಹೊತ್ತಲ್ಲಿ ಪಂಜಿನ ಬೆಳಕು, ಎಲ್ಲರ ಬಾಯಲ್ಲಿಯೂ ದೇಶ ಭಕ್ತಿಯ ಘೋಷಣೆ, ಮುಗಿಲೆತ್ತರಕ್ಕೆ ಮೊಳಗಿದ ದೇಶಭಕ್ತಿಯ ಗೀತೆಗಳು ಇದ್ದೇಲ್ಲವೂ ಕಂಡು ಬಂದಿದ್ದು ವಾಣಿಜ್ಯ ನಗರಿಯಲ್ಲಿ.
ಹೌದು,ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಸ್ವಾತಂತ್ರ್ಯಕ್ಕಾಗಿ ಹೋರಾಡಿ ಪ್ರಾಣ ಅರ್ಪಿಸಿದ ದೇಶಭಕ್ತರಾದ ಭಗತಸಿಂಗ್, ರಾಜಗುರು ಸುಖದೇವ ಅವರ ಬಲಿದಾನ ದಿನದ ಅಂಗವಾಗಿ ಭಗತಸಿಂಗ್ ಯುವಕ ಮಂಡಳಿಯ ವತಿಯಿಂದ ನಗರದಲ್ಲಿ ಪಂಜಿನ ಮೆರವಣಿಗೆ ಜೊತೆಗೆ ಸಾಕ್ಷ್ಯಚಿತ್ರ ಮೆರವಣಿಗೆ ಮಾಡಲಾಯಿತು.
ಮೆರವಣಿಗೆ ಉದ್ದಕ್ಕೂ ಭಗತಸಿಂಗ್, ರಾಜಗುರು ಹಾಗೂ ಸುಖದೇವ ಅವರ ಹೋರಾಟದ ಚಿತ್ರಣ ಹಾಗೂ ದೇಶಭಕ್ತರು ದೇಶಕ್ಕಾಗಿ ಪ್ರಾಣ ಅರ್ಪಣೆ ಮಾಡಿದ ಸಾಕ್ಷ್ಯಚಿತ್ರದ ಮೂಲಕ ಯುವಪೀಳಿಗೆಗೆ ದೇಶಭಕ್ತರ ಪರಿಚಯ ಮಾಡುವ ಮೂಲಕ ವಿನೂತನವಾಗಿ ಬಲಿದಾನ ದಿನವನ್ನು ಆಚರಣೆ ಮಾಡಲಾಯಿತು.
ಇನ್ನೂ ಹುಬ್ಬಳ್ಳಿಯ ನವನಗರದ ಹನುಮಂತ ದೇವಸ್ಥಾನದಿಂದ ಆರಂಭಗೊಂಡ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಜಾಗೃತಿ ಮೂಡಿಸಿದ್ದು, ಮೆರವಣಿಗೆಯಲ್ಲಿ ಸುತಗಟ್ಟಿ ಶಾಲೆಯ ಮಕ್ಕಳು ಭಾಗವಹಿಸಿದ್ದು, ವಿಶೇಷವಾಗಿದೆ.
ಬಲಿದಾನ ದಿನವನ್ನು, ಮಹಿಳಾ ಮಂಡಳದ ಸದಸ್ಯರು, ಯುವಕರು ಹಾಗೂ ಮಕ್ಕಳು ಅರ್ಥಪೂರ್ಣವಾಗಿ ಆಚರಸಿ ಯಶಸ್ವಿಗಿಳಿಸಿದರು.
ಮಲ್ಲೇಶ ಸೂರಣಗಿ ಪಬ್ಲಿಕ್ ನೆಕ್ಸ್ಟ್ ಹುಬ್ಬಳ್ಳಿ
Kshetra Samachara
21/03/2022 09:34 pm