ನವಲಗುಂದ: ಅಣ್ಣಿಗೇರಿ ತಾಲೂಕಿನ ಶಲವಡಿ ಮಾರ್ಗದಲ್ಲಿರುವ ಮಾಜಿ ಸಚಿವ ಕಲ್ಲಪ್ಪ ನಾಗಪ್ಪ ಗಡ್ಡಿ ಅವರ ಜಮೀನಿನಲ್ಲಿ 15 ಗುಂಟೆ ಜಾಗವನ್ನು ಶ್ರೀ ಅಯ್ಯಪ್ಪ ಸ್ವಾಮಿ ದೇಗುಲ ಜೀರ್ಣೋದ್ಧಾರಕ್ಕೆ ಸ್ವ-ಇಚ್ಛೆಯಿಂದ ನೀಡಿದ್ದರು. ಈ ಹಿನ್ನೆಲೆ ಸೋಮವಾರ ಪಟ್ಟಣದ ಉಪ ನೋಂದಣಿ ಕಚೇರಿಯಲ್ಲಿ ಹಕ್ಕು ಪತ್ರಕ್ಕೆ ಸಹಿ ಮಾಡಿದರು.
ಈ ವೇಳೆ ಭೂ ದಾನ ಮಾಡಿದ ಮಾಜಿ ಸಚಿವ ಕೆ.ಎನ್ ಗಡ್ಡಿ ಅವರಿಗೆ ಸಿಹಿ ಹಂಚಿ ಧನ್ಯವಾದಗಳು ತಿಳಿಸಲಾಯಿತು. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿ ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಮದನಮೋಹನ್ ಆನೇಗುಂದಿ, ಶಂಕ್ರಪ್ಪ ಹಳ್ಳದ, ನಾಗಪ್ಪ ಸಂಗಟಿ, ನಿಂಗಪ್ಪ ಮುಳ್ಳೂರ್, ಶಿವಾಜಿ ಕಲಾಲ, ನೇತಾಜಿ ಕಲಾಲ, ಲಕ್ಷ್ಮಣ ಅಗಸಿಮನಿ, ಮಹಾಂತೇಶ್ ಭೋವಿ ಉಪಸ್ಥಿತರಿದ್ದರು.
Kshetra Samachara
17/01/2022 03:18 pm