ನವಲಗುಂದ : ಪಟ್ಟಣದ ಡಾ.ಎಪಿಜೆ ಅಬ್ದುಲ್ ಕಲಾಂ ಅಭಿಮಾನಿಗಳ ಸಂಘದ ಕಚೇರಿಯಲ್ಲಿ ಅವರ ಅಭಿಮಾನಿಗಳ ವತಿಯಿಂದ ಕೇಕ್ ಕತ್ತರಿಸುವ ಮೂಲಕ ಭಾರತ ರತ್ನ ಡಾ. ಎಪಿಜೆ ಅಬ್ದುಲ್ ಕಲಾಂ ಅವರ ಹುಟ್ಟು ಹಬ್ಬವನ್ನು ಆಚರಣೆ ಮಾಡಲಾಯಿತು.
ಈ ಸಂಧರ್ಭದಲ್ಲಿ ಮಾತನಾಡಿದ ಸಂಘದ ಅಧ್ಯಕ್ಷರಾದ ರಿಯಾಜ್ ನಾಶಿಪುಡಿ, ಅಬ್ದುಲ್ ಕಲಾಂ ಅವರು ಹಾಕಿ ಕೊಟ್ಟ ಮಾರ್ಗದರ್ಶನದಲ್ಲಿ ನಾವು ನಡೆಯಬೇಕು ಎಂದು ಹೇಳಿದರು. ಈ ವೇಳೆ ಉಪಾಧ್ಯಕ್ಷ ಸಿದ್ದು ಪೂಜಾರ್, ಖಜಾಂಚಿ ಆಜಾದ್ ನಾಶೀಪುಡಿ, ತಸ್ವೀರ್ ಹಬ್ಬಣ್ಣಿ, ಲಾಲಸಾಬ್ ನದಾಫ್, ವಿನಾಯಕ, ರಜಾಕ್ ಅಲ್ತಾಫ್, ಸ್ವಾಮಿ, ರಫೀಕ್ ಕಲಕುಟ್ರಿ ಹಾಗೂ ಸಂಘದ ಸರ್ವ ಸದಸ್ಯರು ಹಾಜರಿದ್ದರು.
Kshetra Samachara
17/10/2021 09:50 am