ನವಲಗುಂದ : ಸಂಕ್ರಾಂತಿ ಹಿನ್ನೆಲೆಯಲ್ಲಿ ಶನಿವಾರ ನೆರವೇರಬೇಕಿದ್ದ ಕೂಡಲಸಂಗಮ ದೇವಸ್ಥಾನದ ಬಳಿಯ ಹಳ್ಳದಲ್ಲಿ ತೆಪ್ಪದ ತೇರನ್ನು ಎಳೆಯಲಾಗಬೇಕಿದ್ದ ಜಾತ್ರೆಯನ್ನು ರದ್ದುಗೊಳಿಸಲಾಗಿದ್ದು, ದೇವಸ್ಥಾನದಲ್ಲಿ ಸರಳವಾಗಿ ಪೂಜೆ ಸಲ್ಲಿಸಲಾಯಿತು.
ಹೌದು ತಾಲ್ಲೂಕಿನಲ್ಲಿ ಹರಿಯುವ ತುಪ್ಪರಿ ಹಳ್ಳ ಮತ್ತು ಬೆಣ್ಣೆ ಹಳ್ಳ ಕೂಡುವ ಸ್ಥಳವನ್ನು ಕೂಡಲಸಂಗಮ ಎಂದು ಕರೆಯಲ್ಪಡುವ ಈ ದೇವಸ್ಥಾನದ ಜಾತ್ರೆಯಲ್ಲಿ ಹಳ್ಳದಲ್ಲಿ ತೆಪ್ಪದ ತೇರನ್ನು ಎಳೆಯಲಾಗುತ್ತಿತ್ತು.
ಭಕ್ತರು ಊಟ ಕಟ್ಟಿಕೊಂಡು ಸಾಗರೋಪಾದಿಯಲ್ಲಿ ಬಂದು ಇದೆ ದೇವಸ್ಥಾನದ ಬಳಿ ಕೂತು ಕುಟುಂಬ ಸಮೇತರಾಗಿ ಉಂಡು ಸಂತಸ ಪಡುತ್ತಿದ್ದರು. ಆದರೆ ಈ ಬಾರಿ ಕೊರೋನಾ ಹಿನ್ನೆಲೆ ರಾಜ್ಯ ಸರ್ಕಾರ ಹೇರಿದ ವೀಕೆಂಡ್ ಕರ್ಫ್ಯೂ ಗೆ ಜಾತ್ರೆ ರದ್ದಾಗಿದ್ದು, ದೇವಸ್ಥಾನಕ್ಕೆ ಹೋಗುವ ದಾರಿಯನ್ನು ಬಂದ್ ಮಾಡಲಾಗಿತ್ತು.
Kshetra Samachara
16/01/2022 02:42 pm