ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಹೊಲಗಳಲ್ಲಿ ರೈತರ ಚರಗ ಸಂಭ್ರಮ

ನವಲಗುಂದ : ಕುಟುಂಬ ಸಮೇತ ಹೊಲಗಳಿಗೆ ತೆರಳಿ ಪೂಜೆ ಸಲ್ಲಿಸಿ, ಊಟ ಮಾಡಿ, ಹೊಲಗಳಲ್ಲಿ ಚರಗ ಚೆಲ್ಲುವ ಸಂಭ್ರಮ ರೈತರಿಗೆ ಹೇಳ ತೀರದಂತದ್ದು, ಆ ಸಂಭ್ರಮ ಈಗ ರೈತರಲ್ಲಿ ಮತ್ತೆ ಮನೆ ಮಾಡಿದೆ. ತಾಲ್ಲೂಕಿನ ಎಲ್ಲಾ ಹಳ್ಳಿಗಳಲ್ಲಿ ರೈತರು ಇಂದು ಎಳ್ಳ ಅಮಾವಾಸ್ಯೆ ನಿಮಿತ್ತವಾಗಿ ಚರಗ ಚಲ್ಲಿದರು.

ಹೌದು ತಾಲೂಕಿನ ಶಾನವಾಡ ಗ್ರಾಮದ ರೈತರು ಎಳ್ಳ ಅಮಾವಾಸ್ಯೆ ನಿಮಿತ್ತ ರೊಟ್ಟಿ, ಕರೆಗಡಬು, ಶೇಂಗಾ ಹೋಳಿಗೆ, ಕರಚಿಕಾಯಿ, ಪಲ್ಯ, ಅನ್ನಾ ಸಾರು ಮಾಡಿಕೊಂಡು ತಮ್ಮ ಪರಿವಾರದೊಂದಿಗೆ ಜಮೀನಿಗೆ ಹೋಗಿ ಭೂಮಿ ತಾಯಿಗೆ ಪೂಜೆ ಮಾಡಿ, ಜಮೀನಿನಲ್ಲಿ ಆನಂದಿಸಿದರು.

Edited By : PublicNext Desk
Kshetra Samachara

Kshetra Samachara

02/01/2022 05:27 pm

Cinque Terre

9.06 K

Cinque Terre

0

ಸಂಬಂಧಿತ ಸುದ್ದಿ