ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ನವಲಗುಂದ : ಪೈಲ್ವಾನರ ದೀಪಾವಳಿ ಸಂಭ್ರಮ

ನವಲಗುಂದ : ತಾಲ್ಲೂಕಿನ ಬೆಳವಟಗಿ ಗ್ರಾಮದಲ್ಲಿ ನೆನ್ನೆ ಸಡಗರದಿಂದ ಆಚರಿಸಲಾದ ದೀಪಾವಳಿಯ ಪಾಡ್ಯಮಿ ನಿಮಿತ್ತ ಕುಸ್ತಿ ಪೈಲ್ವಾನರಿಂದ ಗರಡಿ ಮನೆಯಲ್ಲಿ ಕಸರತ್ತಿಗೆ ಬಳಸುವ ಗಧಗಳಿಗೆ ಪೂಜೆ ಸಲ್ಲಿಸಿ, ಗ್ರಾಮದಲ್ಲಿ ವಾದ್ಯಗಳನ್ನು ಬಾರಿಸುತ್ತಾ ಮೆರವಣಿಗೆ ಮಾಡಿ, ಪಟಾಕಿ ಸಿಡಿಸಿ ಸಂಭ್ರಮ ಪಟ್ಟರು.

ನಂತರ ಗ್ರಾಮದ ಪೈಲ್ವಾನರೆಲ್ಲ ಕೆರೆಯಲ್ಲಿ ಈಜಿ, ವರ್ಷಗಳಿಂದ ನಡೆಸಿಕೊಂಡು ಬರುತ್ತಿರುವ ಸಂಪ್ರದಾಯವನ್ನು ನೆರವೇರಿಸಿದರು. ಈ ವೇಳೆ ಗ್ರಾಮದ ಜನರು ಸಾಗರೋಪಾದಿಯಲ್ಲಿ ಹರಿದುಬಂದಿದ್ದು, ಹಬ್ಬದಲ್ಲಿ ಸಂಭ್ರಮಿಸಿದರು.

Edited By : PublicNext Desk
Kshetra Samachara

Kshetra Samachara

06/11/2021 03:08 pm

Cinque Terre

18.76 K

Cinque Terre

0

ಸಂಬಂಧಿತ ಸುದ್ದಿ