ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಹುಬ್ಬಳ್ಳಿ: "ರಾಣಿ ಚನ್ನಮ್ಮ ಮೈದಾನ ಗಣಪತಿ"; ವಿಸರ್ಜನೆ ಮೆರವಣಿಗೆ ಸಂಭ್ರಮ

ರಾಜ್ಯ- ದೇಶದ ಗಮನ ಸೆಳೆದಿದ್ದ ಹುಬ್ಬಳ್ಳಿಯ ರಾಣಿ ಚನ್ನಮ್ಮ ಮೈದಾನದಲ್ಲಿ ಶ್ರೀ ಗಣೇಶೋತ್ಸವದ ಅಂಗವಾಗಿ ಆರಾಧನೆಗೊಂಡ ಶ್ರೀ ಮಹಾಗಣಪತಿಯ ಮೆರವಣಿಗೆ ವಿಜೃಂಭಣೆಯಿಂದ ವಿಸರ್ಜನೆಗೆ ಹೊರಟಿದೆ.

ಹು-ಧಾ ಮಹಾನಗರ ಪಾಲಿಕೆ ಮೂರು ದಿನಗಳ ವರೆಗೆ ಶ್ರೀ ಗಣೇಶೋತ್ಸವಕ್ಕೆ ಅನುಮತಿ ನೀಡಿದ್ದು, ಇಂದು ಕೊನೆ ದಿನವಾದ ಹಿನ್ನಲೆಯಲ್ಲಿ ಸಾವಿರಾರು ಭಕ್ತರು ಸೇರಿಕೊಂಡು ಗಣಪತಿ ವಿಸರ್ಜನೆಯಲ್ಲಿ ಭಾಗಿಯಾದರು.

ಭಜನೆ, ಡೊಳ್ಳು ಕುಣಿತ, ಬೊಂಬೆ ಕುಣಿತ, ಹೆಜ್ಜೆ ಕುಣಿತ ಇತ್ಯಾದಿ ಮೆರವಣಿಗೆಯಲ್ಲಿ ವಿಜೃಂಭಿಸಿತು. ಅಹಿತಕರ ಘಟನೆ ನಡೆಯದಂತೆ ಸಿಆರ್‌ಪಿಎಫ್ ಮತ್ತು ಕೆಎಸ್‌ಆರ್‌ಪಿ ಪೊಲೀಸರು ನಿಯೋಜನೆಗೊಂಡಿದ್ದಾರೆ.

Edited By :
Kshetra Samachara

Kshetra Samachara

02/09/2022 03:06 pm

Cinque Terre

30.21 K

Cinque Terre

2

ಸಂಬಂಧಿತ ಸುದ್ದಿ