ಅಪ್ಲಿಕೇಶನ್‌ನಲ್ಲಿ ಉಚಿತವಾಗಿ ಪೂರ್ಣ ವೀಡಿಯೊವನ್ನು ವೀಕ್ಷಿಸಿ

ಅಳ್ನಾವರ: ಸಡಗರದ ನಡುವೆಯೂ ಕಟ್ಟೆಚ್ಚರದಲ್ಲಿ ಗಣೇಶೋತ್ಸವ

ಅಳ್ನಾವರ ಸೇರಿದಂತೆ ತಾಲೂಕಿನೆಲ್ಲಡೆ ಕೊರೊನಾದಿಂದಾಗಿ ಎರಡು ವರ್ಷ ಸಿಂಪಲ್ಲಾಗಿ ನಡೆದಿದ್ದ ಗಣೇಶೋತ್ಸವ ಈ ವರ್ಷ ಮೆರಗು ಪಡೆಯಲಿದೆ. ಎಲ್ಲೆಡೆ ಅದ್ದೂರಿ ಗಣೇಶೋತ್ಸವಕ್ಕೆ ಸಿದ್ಧತೆಗಳು ನಡೆಯುತ್ತಿವೆ. ಹೀಗಾಗಿ ಪೊಲೀಸ್ ಇಲಾಖೆ ಕೂಡ ಅಳ್ನಾವರದಲ್ಲಿ ಸಾಕಷ್ಟು ಬಂದೋಬಸ್ತ್ ಗಾಗಿ ತಯಾರಿ ನಡೆಸಿದೆ.

ಕೋವಿಡ್ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಗಣೇಶೋತ್ಸವ ಆಚರಣೆಗೆ ಹಲವು ನಿರ್ಬಂಧನೆ ವಿಧಿಸಿತ್ತು.ಈ ವರ್ಷ ಕೋವಿಡ್ ನಿಯಂತ್ರಣದಲ್ಲಿರುವುದರಿಂದ ಸಂಭ್ರಮದ ಗಣೇಶೋತ್ಸವಕ್ಕೆ ಪಟ್ಟಣ ಸೇರಿದಂತೆ ತಾಲೂಕಿನ ಹಳ್ಳಿಗಳು ಸಹ ಸಿದ್ಧವಾಗಿವೆ.

ಅಳ್ನಾವರದಲ್ಲಿ ಗಣೇಶೋತ್ಸವದ ಮಂಟಪ ಅಲಂಕಾರ ನೋಡಿ ಸಂಭ್ರಮಿಸಲು ತಾಲೂಕಿನ ಡೋರಿ,ಅಂಬೋಳ್ಳಿ,ಅರವಟಗಿ ಸೇರಿದಂತೆ ಸುತ್ತ ಮುತ್ತಲಿನ ಹಳ್ಳಿಯ ಜನರು ಬರುತ್ತಾರೆ.ಹೀಗಾಗಿ ಮಂಟಪ ಸುರಕ್ಷತೆ,ಪಟಾಕಿ ಹೊಡೆಯುವಲ್ಲಿ ವಹಿಸಬಹುದಾದ ಎಚ್ಚರಿಕೆ,ಧ್ವನಿ ವರ್ಧಕ ಬಳಕೆ ಮಿತಿ,ಗಣೇಶ ಮೆರವಣಿಗೆ ಸುಸೂತ್ರವಾಗಿ ನಡೆಸುವುದು ಸೇರಿದಂತೆ ಸುರಕ್ಷತೆಯ ಗಣೇಶ ಹಬ್ಬಕ್ಕೆ ಈ ಬಾರಿ ಹೆಚ್ಚು ಮಹತ್ವ ಪಡೆದುಕೊಂಡಿದೆ.

ಮಹಾಂತೇಶ ಪಠಾಣಿ ಪಬ್ಲಿಕ್ ನೆಕ್ಸ್ಟ್ ಅಳ್ನಾವರ

Edited By :
Kshetra Samachara

Kshetra Samachara

29/08/2022 12:32 pm

Cinque Terre

17.92 K

Cinque Terre

0

ಸಂಬಂಧಿತ ಸುದ್ದಿ